ನಾನು ಇದನ್ನು ಧಾರವಾಡದಲ್ಲಿ ಎಂ. ಎ ಪಿಎಚ್.ಡಿ ಮಾಡಲು ಹಾಸ್ಟೆಲ್ನಲ್ಲಿ ಇದ್ದಾಗ , ಅಲ್ಲಿ ಮೆಸ್ಸ್ ಆಂಟಿ ಹತ್ರಾ ಕಲಿತಿದ್ದು. ಮಾದೇವಿ ಆಂಟಿಗೆ ಥ್ಯಾಂಕ್ಸ್ .....
ಅಗತ್ಯಗಳು:
ಗಜ್ಜರಿ ೫< ೫ಜನರಿಗೆ >
ಹಾಲು ಅರ್ಧಾ ಲೀಟರ್
ಸಕ್ಕರೆ ೫ ಚಮಚ
ತುಪ್ಪ ೩ ಚಮಚ
ಬೇಕಾದರೆ ಗೋಡಂಬಿ .. ಬಾದಾಮಿ ಚೂರುಗಳು
ಮಾಡಲೇ ಬೇಕಾಗಿದ್ದು:
ಮೊದಲು ಗಜ್ಜರಿಯನ್ನು ತೊಳೆದು ಮೇಲಿನ ಪದರವನ್ನು ತೆಗೆದು... ಸ್ವಚ್ಚಮಾಡಿ. ಗಜ್ಜರಿಯನ್ನು ತುರಿದು ತುಪ್ಪ ಹಾಕಿ ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ. ಸ್ವಲ್ಪ ಆರಿದಮೇಲೆ ಆ ಹುರಿದ ಗಜ್ಜರಿಯ ತುರಿಯನ್ನು ಮಿಕ್ಸಿಯಲ್ಲಿ ಒಂದು ಕ್ಷಣ ತಿರುಗಿಸಿ. ೧ ಕ್ಷಣ ಇದು ನೆನಪಿರಲಿ. ಆಮೇಲೆ ಈ ಪುಡಿಯಾದ ಗಜ್ಜರಿಯನ್ನು ದಪ್ಪ ತಳದ ಪಾತ್ರೆಯಲ್ಲಿ ಹಾಲಿನೊಂದಿಗೆಸಕ್ಕರೆ ಹಾಕಿ ೧೦ ನಿಮಿಷ ಕುದಿಸಿ. ಗೋಡಂಬಿ ಚೂರುಗಳನ್ನೂ ಕುದಿಯುವಾಗಲೇ ಹಾಕಿ. ಗೋಡಂಬಿಯನ್ನು ಹುರಿಯಬಾರದು. ಈ ಪಾಯಸ ಬಿಸಿಯಾಗಿರುವದಕಿಂಥ ಫ್ರಿಡ್ಜ್ ನಲ್ಲಿ ಇಟ್ಟು ತಂಪಾಗಿಸಿದರೆ ಇನ್ನು ರುಚಿಯೆನಿಸುವದು. ಇದಕ್ಕೆ ಬೇಕಾದರೆ ಖೋವಾ ಹಾಕಬಹುದು.
ಬಣ್ಣ ಕೂಡಾ ನೋಡಲು ಚೆಂದ.
ಫೋಟೋ ನಾನು ಗೂಗಲ್ ನಿಂದ ತೆಗೆದುಕೊಂಡಿದ್ದೇನೆ. ಸಧ್ಯ ಈ ಪಾಯಸ ಮಾಡಿರದ ಕಾರಣ!
antoo, hostellina ootadalli ondaadaroo tinnalu yogyavaagittu annu :-).
ಪ್ರತ್ಯುತ್ತರಅಳಿಸಿhiii.... suman ninge nenpaaytene... hostel oota/ idu revised dish.... avaru haakuva ingdrnts haakidre yaaru tintaare? aadre kalisida credit avrgene kodbeku alva?
ಪ್ರತ್ಯುತ್ತರಅಳಿಸಿ