09 ಫೆಬ್ರವರಿ 2011

ಸಹಪಥಿಕನಲ್ಲಿ ...

 ಮಲ್ಲಿಗೆಯ ಮಾಲೆಯನು   ಹಿಡಿದು ನಿನ್ನಲ್ಲಿ ಬಂದೆ
ನೀನು ಕಾಯುವ ಹಾದಿ ನಾ ಬಲ್ಲೆನಲ್ಲ.  
ನಾ ಹಿಡಿದ ಮಲ್ಲಿಗೆಯು ನಿನ್ನಲ್ಲಿಯ ಸಂಪಿಗೆಯು 
ಏರುವವು ಊರ ಮುಂದಿನ ದೇವರಿಗೆಯೇ! 


ನಾ ಹೇಳುವ ಮಾತು ನಿನ್ನಲ್ಲಿಯೂ ಇದೆ 
ಸಿರಿತನಕ್ಕೂ ಮಿಗಿಲಾಗಿದೆ ನಿನ್ನಲ್ಲಿಯ ಸ್ನೇಹ .
ಮನ ಹಗುರಾಗಲು ,ತನುವಿಗೆ ಹಿತವೆನಿಸಲು 
ನಿನ್ನದೊಂದು ಸ್ಪರ್ಶ ಸಾಕೆನಲೇ?


ಅಂದು ಹಿಂದಿನ ಮಾತು ಸಂದರ್ಭಕ್ಕನುಸಾರಿ 
ಪುನಃ  ಏಳುವ ಭಾವ ಪ್ರೀತಿಯೊಂದೇ.
ನೀನು ಸಂಯಮಿ, ನಾನು ಸ್ನೇಹಾಕಾಂಕ್ಷಿ
ನಮ್ಮಿಬ್ಬರ ಮನವೀಗ ಹಾಯಾಗಲು.


ಬಂದ ಭಾವಕ್ಕೊಂದು ರೂಪುಕೊಡಲೆಮಗೆ 
ಸಂಪ್ರೀತವೆನಿಸಿದೆ  ಜೀವಕ್ಕೆಲ್ಲ .
ದೊರೆತ ಹಿರಿಯರ ಹಾರೈಕೆ, ಜತೆಯಿರಲು ನಮಗೇಕೆ 
ಜೋಕೆ ಎನ್ನುವ ಮಾತು ಇನ್ನು ಬೇಕೇ.? ......
                                                             ಪ್ರೀತಿಯ ಸಿರಿತನದ ಸವಿಯಲ್ಲಿ....
                                                             ಚಂದ್ರಿಕಾ ಹೆಗಡೆ .

4 ಕಾಮೆಂಟ್‌ಗಳು:

  1. ನಿಮ್ಮ ಬ್ಲಾಗ್ ಗೆ ನನ್ನ ಆಕಸ್ಮಿಕ ಮತ್ತು ಮೊದಲನೇ ಭೇಟಿ :)

    ನಿಮ್ಮ ಕವನಗಳನ್ನ ಓದಿದೆ ತುಂಬಾ ಇಷ್ಟವಾಯ್ತು :)

    ಶುಭವಾಗಲಿ

    ಪ್ರತ್ಯುತ್ತರಅಳಿಸಿ