25 ಜನವರಿ 2011

ಅರ್ಥವಾಗಿದೆ




ಅಮ್ಮಾ,
ಅಂದು, ನಿನ್ನ ಗರ್ಭದಲ್ಲಿ ನಾ ಮೂಡಿದ
ಕ್ಷಣಗಳಲ್ಲಿ ಬೇಸರಗೊಂಡಿದ್ದೆ.
ಸಣ್ಣ ಜಾಗೆಯಲ್ಲಿ , ಕತ್ತಲು ಬೇರೆ
ಬೆಳೆಯುವದು ಎಲ್ಲಿ ಎಂದು.
ನಿನ್ನ ಮನದ ಹೊಯ್ದಾಟ ನನಗರಿವಿರಲಿಲ್ಲ.

ಕಾಲ ಸರಿಯುತ್ತಲೇ -
ನಾ ನಿನ್ನ ಗರ್ಭಾಗಾರವನ್ನು ಆವರಿಸಿದ್ದೆ
ಹೊರಬರಲು ಕಿಂಚಿತ್ತೂ ಮನಸಿರಲಿಲ್ಲ
ನಿನ್ನ ಕರಸ್ಪರ್ಶದ ಹಿತಾನುಭವ
ಒಳಗಿನಿಂದಲೇ-
ನಿನ್ನ ಮನದ ಬಯಕೆ- ನನ್ನದೂ ಆಸೆ
ನಾ ಒದೆಯುವಲ್ಲಿ ನೀ  ತಡವುತ್ತಿದ್ದೆ ..
ನಿನ್ನ ಮಾತಿಗೆ ನನ್ನ ಉತ್ತರ
ಅದೇ ಒದೆತವೆ  ...
ಆದರೂ, ನಿನ್ನ ಮನದ ಬೇಗುದಿ ತಿಳಿಯುತ್ತಿರಲಿಲ್ಲ.


ಇಂದು,
ನೀ ಅಂದು ಸಣ್ಣ ಜಾಗೆಯಲ್ಲಿ ಕತ್ತಲಲ್ಲಿ
ಬೆಳೆಸಿದ್ದರ ಬಗೆಗೆ ಚಿಂತಿಸುತಿರುವೆ
ಇಂದು ಬಯಲಿನಲ್ಲಿ, ಬೆಳಕಿನಲ್ಲಿ  ನಾ
ಇರುವದರ ಕುರಿತೂ_
ನಿನ್ನ ಮನದ ಅಂದಿನ ತೊಳಲಾಟ
ಇಂದಿಂಗೆ ಸ್ವಲ್ಪ ಅರಿವಾಗುತ್ತಿದೆ.
ಹೊಟ್ಟೆಯಲ್ಲಿ ಆವರಿಸಿಕೊಂಡಿದ್ದ
ನನ್ನ ಹೊರ ಹಾಕಿ ಜಗತ್ತಿಗೆ ತೋರಿಸುವ
ನಿನ್ನ ಪ್ರಯತ್ನ, ಬೇನೆ
ಬಂದ ಮೇಲೆ ಮುಂದುವರೆಸುತ್ತಲೇ ಹೋದ
ನಿನ್ನ ಪ್ರೀತಿ , ಅಂತಃಕರಣ , ವಾತ್ಸಲ್ಯ....
ನಿಘಂಟಿನಲ್ಲಿ ಹುಡುಕಿದ್ದೇನೆ
ಶಬ್ದದ ಪೂರೈಕೆ ಸೀಮಿತವಾಗಿದೆ ,,ಅಮ್ಮಾ, ಕ್ಷಮಿಸು
ಅಂತೂ....
ನಿನ್ನ ಮನದ ಬೇಗುದಿ ಇಂದು
" ಅರ್ಥವಾಗಿದೆ"

23 ಕಾಮೆಂಟ್‌ಗಳು:

  1. awesome Chandrikakka.... brought drops in the eyes as a token of thanks to Mom....simply superb..!!

    ಪ್ರತ್ಯುತ್ತರಅಳಿಸಿ
  2. ತಾಯಿ ಮಮತೆಗಿಂತ ಮಿಗಿಲಿಲ್ಲ.. ಅದ
    ತಿಳಿಯದವರು ಮನುಜರಲ್ಲ
    ಹುಟ್ಟುವಾಗಳು " ಅಮ್ಮ"
    ಅಳುವಾಗಲು " ಅಮ್ಮ"
    ನಗುವಾಗಲು " ಅಮ್ಮ"
    ಬಿದ್ದಾಗಲೂ " ಅಮ್ಮ"
    ನಮ್ಮ ಪ್ರತಿ ಉಸಿರಲ್ಲೂ ಆ ಅಮ್ಮನ ಹಾರೈಕೆ..
    ಅದು ನಮಗೆ ಅರಿವಿಲ್ಲದೆಯೇ..
    ನಾವು ಎಲ್ಲಿಯೇ ಇದ್ದರು.. ಸದಾ ನಮಗಾಗಿ
    ಮಿಡಿಯುವ ಹೃದಯ ಇದೆ ಎಂದರೆ
    ಅದು " ಅಮ್ಮ"


    ಅಮ್ಮನ ಅರ್ಥ ಮಾಡಿಸಲು ಸುಂದರ ಕವನ ಬರೆದಿದ್ದಿರ.. ನಿಮಗೊಂದು ಪುಟ್ಟ ಪ್ರಶ್ನೆ.. ಇದರ ಅರ್ಥ ನಿಮಗೆ ನೀವು ಅಮ್ಮನಾದ ಮೇಲೆ ಮೂಡಿ ಬಂದಿರುವುದೇ...???

    ಪ್ರತ್ಯುತ್ತರಅಳಿಸಿ
  3. illa.... olle prashne... nijavaagi idannu naanu 6 varshagala hinde hostel lifenalli iddaga ammana nenapu aagi baredidde. aadre idannu" arthavaagabekide" antha .... iga swalpa arthvaagide ... antha edit!.. thank u benaka...
    bekaadare arthavaagide iruvalli arthavagabekide antha odabahudu... innu hechchu bhava spurana aagabahudu!

    ಪ್ರತ್ಯುತ್ತರಅಳಿಸಿ
  4. ಚಂದ್ರಿಕಾ...
    ಕವಿತೆ ಅರ್ಥಪೂರ್ಣವಾಗಿದೆ
    ತಾಯಿಯ ಗರ್ಭದಲ್ಲಿ ಅಡಗಿರುವ ಕಂದನ ಅಳಲನ್ನು, ಅನಿಸಿಕೆಯನ್ನು, ಅನುಭವವನ್ನು ಒಬ್ಬ ಮಹಿಳೆಯಲ್ಲದೇ...... ಬೇರೆ ಯಾರಾದರೂ ಅನುಭವಿಸಲು, ಬರೆಯಲು ಸಾಧ್ಯವೇ ....

    ಪ್ರತ್ಯುತ್ತರಅಳಿಸಿ
  5. howdu... adre arthvannu maadabahudenoo... enenoo kalpisikollutteve sukhada daarigalannu.. ondu novannu... sankata... tolalaatavannu arthamaadikondre asthe samaadhaana alva hennige..

    ಪ್ರತ್ಯುತ್ತರಅಳಿಸಿ
  6. ಆರ್ಧ ಕವನ, ಮನಸ್ಸನ್ನು ತಟ್ಟಿತು. ಭಾವನೆಗಳನ್ನು ಸರಳವಾಗಿಯೂ ಅಷ್ಟೇ ಸ್ಪಷ್ಟವಾಗಿಯೂ ಬರೆಯಬಲ್ಲ ಲಯ ನಿಮ್ಮಲ್ಲಿದೆ.

    ನನ್ನ ಬ್ಲಾಗಿಗೆ ಬನ್ನಿರಿ:
    www.badari-poems.blogspot.com
    www.badari-notes.blogspot.com
    www.badaripoems.wordpress.com

    ಪ್ರತ್ಯುತ್ತರಅಳಿಸಿ
  7. ಅಮ್ಮ ಅನ್ನೋ ಒಂದೇ ಶಬ್ದ ಸಾಕು. ಆ ವಿಷಯದಲ್ಲಿ ಏನೇ ಬರೆದರೂ ಅದು ಸುಪರ್ ಹಿಟ್. ಅದರಲ್ಲೂ ನೀನು ಬರೆದದ್ದು ತುಂಬಾ ಚನ್ನಾಗಿ ಆಯ್ದು.
    ನಾನು ನನ್ನ ಅಮ್ಮಂಗೆ ಓದಿ ಹೇಳಿದ್ದೆ. ಅದು ತುಂಬಾ ಖುಷಿ ಪಟ್ಟಿದ್ದು. ಥ್ಯಾಂಕ್ಸ್ ಇಷ್ಟು ಒಳ್ಳೆ ವಿಷಯ ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ

    ಪ್ರತ್ಯುತ್ತರಅಳಿಸಿ
  8. ಹೌದೆ ಮಾರಾಯ್ತಿ... ಅಮ್ಮನ ಬಗ್ಗೆ ನಂಗೆ ಶಬ್ದನೆ... ಸಾಕಾಯ್ದಿಲ್ಲೇ... ಹೇಳಲೇ ... ಈ ಕವಿತೆ ಸಮಾಧಾನ ಕೊಟ್ಟಿದ್ದಿಲ್ಲೆ... ಇನ್ನಸ್ಟು ನಿರೀಕ್ಷೆ ನನ್ನದು ಇತ್ತು....

    ಪ್ರತ್ಯುತ್ತರಅಳಿಸಿ
  9. Abba amma estu nenapadru nange!!!

    @Benaka - Tande Taayi Runa Tirsodakke agalla. Especially "Amma" simply great. Aa shabdane haage astu apyaayamaana vadaddu...

    Thanks for a great poem...

    ಪ್ರತ್ಯುತ್ತರಅಳಿಸಿ