07 ಮಾರ್ಚ್ 2011

ಜನ್ನನ "ಯಶೋಧರ ಚರಿತೆ "ಯಲ್ಲಿ ಇಷ್ಟವಾದ ಕೆಲವು ಮಾತುಗಳು


    " ಬೇವಂ ಮೆಚ್ಚಿದ ಕಾಗೆಗೆ ಮಾವಿಳಿದಪ್ಪಂತೆ"
ಬೇವನ್ನು ಮೆಚ್ಚಿದ ಕಾಗೆಗೆ ಮಾವು ಮೆಚ್ಚಿಗೆಯಾದೀತೆ ?


"ಪರಮೆ ಪಗಲ್ ಮುಗಿಯೇ ಸಿಲ್ಕಿ ಕೈರವದಿನಿರುಳ್ ಪೊರಮಡುವಂತೆ"
ನೈದಿಲೆಯೊಳಗೆ ಸಿಕ್ಕಿ ಬಿದ್ದ ಹೆಣ್ಣು ದುಂಬಿ , ಹಗಲು ಕಳೆದಾಗ ಅದರೊಳಗಿಂದ ಹೊರಹೋಗುವಂತೆ ....


"ಈಗಳೋ ಮೇಣ್ ಆಗಳೋ ಮೇಣ್ 
ಸಾಗುದುರೆಗೆ ಪುಲ್ಲನಡಕಿ  ಕೆಡುವನೆ ಚದುರಂ "
ಬುದ್ಧಿವಂಥನಾದವನು ಈಗಲೋ ಆಗಲೋ ಇನ್ನಷ್ಟು ಹೊತ್ತಿನಲ್ಲೋ ಸಾಯುವ ಕುದುರೆಗೆ ಹುಲ್ಲು ಹಾಕಿ ಹಾಳಾಗುತ್ತಾನೆಯೇ?


"ಮೇಗಂ ಬಗೆವೊಡೆ ವಧೆ ಹಿತಮಾಗದು" 

ಮೇಲ್ಮೈಯನ್ನು ಬಯಸುವದಾದರೆ , ಕೊಲೆ ಮನುಷ್ಯನಿಗೆ ಹಿತವನ್ನು ಉಂಟುಮಾಡುವದಿಲ್ಲ.


" ಕಣ್ಣರಿಯದೊಡಮ್   ಕರುಳರಿಯದೆ ?"

ಕಣ್ಣು ಅರಿಯದಿದ್ದರು ಕರುಳರಿಯದೆ .....


".... ಕೋಣನ ಪೋರ್ಕುಳಿ ಗಿಡುವಿಗೆ ಮಿತ್ತು "
ಕೋಣನ ಕದನ ಕುತೂಹಲ ಗಿಡಕ್ಕೆ ಮೃತ್ಯು 

"ಪೊಲ್ಲಮೆಯೇ  ಲೇಸು ನಲ್ಲರ  ಮೈಯೋಳ್"
ನಮ್ಮ ಮೆಚ್ಚಿನವರ ಮೈಯಲ್ಲಿ ದೋಷವಿದ್ದರೆ ಅದೇ ಅವರ ಮೇಲ್ಮೈ ಎನಿಸುತ್ತದೆ .


"ತರಿದೊಡೆ ಕಡಿದೊಡೆ  ಸೀಳ್ ದೊಡೆ 
ಪೊರಮಡುವಂತೆ ಕಿಚ್ಚು ಕಾಷ್ಠ ದಿಂ ಪೊಸೆಯಲೋಡಮ್
ಪೊರಮಡುವದಂತೆ "
ಕಟ್ಟಿಗೆಯನ್ನು ಕೊಚ್ಚಿದರೆ, ಸೀಳಿದರೆ ಹೇಗೆ ಮಾಡಿದರೂ ಅದರಿಂದ ಬೆಂಕಿ ಹೊರಡುವದಿಲ್ಲ. ಅದನ್ನು ತಿಕ್ಕಿದಾಗ ಮಾತ್ರ ಅದರಿಂದ ಅಗ್ನಿ ಉದ್ಭವಿಸುತ್ತದೆ. 



                         ಅಕ್ಷರಗಳು  ಯಾಕೋ ಸರಿಯಾಗಿ ಮೂಡುತ್ತಿಲ್ಲ. 

                              ಓದಿನಲ್ಲಿ...

                            ಚಂದ್ರಿಕಾ ಹೆಗಡೆ

7 ಕಾಮೆಂಟ್‌ಗಳು:

  1. ಚಂದ್ರಿಕಾ,
    ಜನ್ನನ ಕಾವ್ಯದ ಸುಂದರ ಭಾಗಗಳನ್ನು ನಮಗೆ ಎತ್ತಿ ಕೊಟ್ಟದ್ದಕ್ಕಾಗಿ ಧನ್ಯವಾದಗಳು.
    ಇಂತಹ ರಸಘಟ್ಟಿಗಳನ್ನು ಎಲ್ಲ ಕಾವ್ಯಗಳಿಂದಲೂ ನಮಗೆ ಉಣಬಡಿಸಿರಿ ಎಂದು ಕೋರುತ್ತೇನೆ.

    ಪ್ರತ್ಯುತ್ತರಅಳಿಸಿ
  2. ಇಂಥಹ ಎಸ್ಟೋ ಒಳ್ಳೆಯ ನುಡಿಗಳು ಹಳೆಗನ್ನಡ ಕಾವ್ಯದಲ್ಲಿ ಇವೆ. ಆದ್ರೆ ನಿರ್ಲಕ್ಷ್ಯಕ್ಕೆ ಒಳಗಾಗಿ ಮೂಲೆಸೇರಿವೆ!....ತಮ್ಮ ಕೋರಿಕೆಯನ್ನು ... ಸ್ವಲ್ಪವಾದರೂ ತುಂಬುತ್ತೇನೆ... ಆ ದಿಕ್ಕಿನತ್ತ ಪ್ರಯತ್ನ ನಡೆಸುತ್ತೇನೆ ....

    ಪ್ರತ್ಯುತ್ತರಅಳಿಸಿ
  3. ಅಕ್ಕ.. ನಿಮಗೊಂದು.. ಸಲಾಂ.. ಮತ್ತು.. ಧನ್ಯವಾದಗಳು.. ಇಂತ ಕಾವ್ಯಗಳ ತುಣುಕುಗಳನ್ನ ಓದಿ ಎಷ್ಟೋ.. ದಿನಗಳಾಗಿದ್ದವು.. ತುಂಬಾ.. ಚನ್ನಾಗಿದೆ.. sunaath ಅವರು ಹೇಳಿದಂತೆ.. ಇಂಥಹ.. ಒಳ್ಳೆ ಒಳ್ಳೆ.. ಸಂಗ್ರಹಗಲ್ಲನ್ನ.. ನಿಮ್ಮಿಂದ.. ನಮಗೆ ಸಿಗಲಿ..

    ಪ್ರತ್ಯುತ್ತರಅಳಿಸಿ
  4. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  5. houdu meelinavarella heelidante, intaha kaavyada tunukugalu (artha sahita ;-))innashtu barali endu korike.

    ಪ್ರತ್ಯುತ್ತರಅಳಿಸಿ
  6. ಧನ್ಯವಾದಗಳು.. ಇಂತ ಕಾವ್ಯಗಳ ತುಣುಕುಗಳನ್ನ ಓದಿ ಎಷ್ಟೋ.. ದಿನಗಳಾಗಿದ್ದವು.. ತುಂಬಾ.. ಚನ್ನಾಗಿದೆ.. ಇಂಥಹ.. ಒಳ್ಳೆ ಒಳ್ಳೆ.. ಸಂಗ್ರಹಗಲ್ಲನ್ನ.. ನಿಮ್ಮಿಂದ.. ನಮಗೆ ಸಿಗಲಿ..

    ಪ್ರತ್ಯುತ್ತರಅಳಿಸಿ