
ಪ್ರೀತಿಯ ಗೆಳತಿ,
ನಾನು ಇವತ್ತು ನನ್ನ ಕಾಲೇಜಿನಲ್ಲಿ ತರಗತಿಗೆ ಹೋಗಬೇಕೆಂದು ಹೊರಟಿದ್ದೆ. ಆದರೆ ಯಾವುದೋ ಕಾರ್ಯಕ್ರಮದ ನಿಮ್ಮಿತ್ತ ತರಗತಿ ನಡೆಯುವದಿಲ್ಲವೆಂದು ತಿಳಿದು ಹಿಂದಿರುಗಿ ಬರುತಲಿದ್ದೆ. ತಟಕ್ಕನೆ ನನ್ನನ್ನು ಒಂದು ಸುವಾಸನೆ ಸೆಳೆಯಿತು ಕಣೆ! ತಿಳಿಯಬೇಡ"ಯಾವುದೊ ಪರಿಮಳ ದ್ರವ್ಯವೆಂದು ". ' ಉಪ್ಪಲ್ಲಿ ಹಾಕಿದ ನೆಲ್ಲಿಕಾಯಿ ವಾಸನೆಯೇ ಅದು!' ಅದೆಕೆನೋ ಒಂದರೆಘಳಿಗೆ ಅಲ್ಲೇ ಸ್ತಬ್ಧ .
ಗೆಳತಿ, ಇದಕ್ಕೆಲ್ಲ ಕಾರಣ ನೀನೆ! ಬಿಡೆ ಇಲ್ಲದೆಯೇ ಹೇಳುವೆನು.. ಹಂ... ಅದೇನು ರುಚಿಯಿತ್ತೆ ನಿಮ್ಮ ಮನೆಯಿಂದ ತರುತ್ತಿದ್ದ ಆ ನೆಲ್ಲಿಕಾಯಿಗಳು. ಉಪ್ಪಿನ ನೀರಿಗೆ ಸೂಜಿ ಮೆಣಸು, ಇಂಗು.. ಜಪ್ಪಿ ಭರಣಿಯಲ್ಲಿ ಹಾಕಿ, ಒಂದು ವಾರದ ನಂತರ ತರುತ್ತಿದ್ದೆಯಲ್ಲ.... ನಿನ್ನ ಪಾಟಿಚೀಲ ನನ್ನ ಬಳಿ ಇಟ್ಟಾಗಲೇ ನಾನು ಅರ್ಥಮಾಡಿಕೊಳ್ಳುತ್ತಿದ್ದೆ, ಅದ್ರಲ್ಲಿ ನನಗೆ ಬೇಕಾದಸ್ಟು ನಾನು ತೆಗೆಯಬಹುದೆಂದು.... ಜತೆಯಲ್ಲಿ ನಾಳೇನು ತರ್ತೇನೆ ಎಂಬ ಭರವಸೆ...
ನೆಲ್ಲಿಕಾಯಿ ದಿನಗಳಲ್ಲಿ ನಮ್ಮ ಹೊಟ್ಟೆಯಲ್ಲಿ ಬರಿ ... ಅದೇ! ಅದಕ್ಕೇನೆ ಇರಬೇಕು ನಾವು ಅಸ್ಟೊಂದು ಚುರುಕು<!>
ಮನೆಗೆ ಬರುವಸ್ಟರಲ್ಲಿ ಪಾಟಿಚೀಲದಲ್ಲಿ ಬೀಜಗಳೇ ತುಂಬಿರುತ್ತಿತ್ತು. ಬಾಯಿ ನೋಡಿದರೆ ಇವರಿಗೆ ಯಾವಾಗಲೂ ಹಲ್ಲು ನೋವೇನೋ ಅನ್ನುವ ಹಾಗೆ ಒಂದು ಕಡೆ ನೆಲ್ಲಿಕಾಯಿ ಯನ್ನು ತುಂಬಿ ಉಬ್ಬಿರುತ್ತಿತ್ತು. ಆ ದಿನಗಳು ಮುಗಿಯಿತೆಂದರೆ ನೆಲ್ಲಿಕಾಯಿಯ ಉಳಿದ ಉತ್ಪನ್ನಗಳು ನಮ್ಮಲ್ಲಿ ಸಿದ್ಧವಾಗಿರುತ್ತಿತ್ತು. !
ನೆಲ್ಲಿ ಕಾಯಿ ಚಿಟ್ಟು ....
ಬಾಯಲ್ಲಿ ನೀರು ಬಂತೆ ಇವತ್ತು...ಹೀಗೆ ಒಂದು ದಿನ ನೆನಪಾದಾಗ ಗಾಂಧೀ ಬಜಾರ್ ಗೆ ಹೋಗಿ ೧ ಕೆ.ಜಿ ತಗೊಂಡು ಬಂದು ಜಾಮ್ ಮಾಡಿ ಇಟ್ಟಿದ್ದೇನೆ. ಆದರೆ ಆ ಉಪ್ಪಲ್ಲಿ ಹಾಕಿದ ನೆಲ್ಲಿಕಾಯಿಗಳಿಗೆ ಇದು ಒಂಚೂರು ಸಮ ಅಲ್ಲಾ ಮಾರಾಯ್ತಿ.
ನೆಲ್ಲಿ ಕಾಯಿ ಹಾಕಿದ ಮೇಲೆ ಅದ್ರ ಮೇಲೆ ಹದಿ ಬಂದರೆ ನೆಲ್ಲಿ ಬಹಳ ರು,,,,ಚಿ... ಆಗ್ತು ಎನ್ನುವ ನಿನ್ನ ಮಾತುಗಳು ನನ್ನಲ್ಲಿ ಇವತ್ತಿಗೂ ಇದೆ... ಏನು ಮಾಡಲಿ ನೆಲ್ಲಿಕಾಯಿಗಳೇ ಇಲ್ಲ!
ಬಾಯಲ್ಲಿ ರುಚಿಯಿದೆ ಬೀಜಗಳೇ ಇಲ್ಲ! ಇದಕ್ಕೆಲ್ಲ ನೀನೆ ಕಾರಣ ... ಹಾಂ...ಮೊದಲು ಮದುವೆಯಾಗಿ ಹೋಗಿದ್ದು ನೀನೆ!... ಒಂದು ಕಾರಣ... ತಿರುಗಿ ಮಾತಾಡಬೇಡ...'ಉನ್ನತ ವ್ಯಾಸಂಗಕ್ಕಾಗಿ ಹೋಗಿದ್ದು ನೀನು ಅಂತ ' . ಭಾವನ ಹತ್ತಿರ ಹೇಳಿ ಎಳೆದುಕೊಂಡು ಬರುತ್ತೇನೆ ...ಒಟ್ನಲ್ಲಿ ಉಪ್ಪಲ್ಲಿ ಹಾಕಿದ ಆ ನೆಲ್ಲಿಕಾಯಿ ಕೊಡು...
ನೆನಪಿದೆಯೇ ಸುಬ್ಬಿ, ಪಾಟೀ ಚೀಲದಲ್ಲಿ ಇಟ್ಟ ಎಲ್ಲಾ ವಸ್ತುಗಳೂ ನೆಲ್ಲಿಕಾಯಿ ವಾಸನೆಯೇ! ಕಡ್ಡಿ ಬರೆಯದೆ ಇರುವದಕ್ಕು ಇದೆ ಕಾರಣ!
ಹೇ...ಟೀಚರ್ ಬೋರ್ಡಿನ ಕಡೆಗೆ ತಿರುಗುವದನ್ನು ಕಾದು...ಪಟಕ್ಕನೆ ನೆಲ್ಲಿ ಕಾಯಿ ಕೆರೆದು ಸವಿದ ಘಳಿಗೆ ನಮ್ಮದೇನೆ ....
ಮುಂದಿನ ಸಲ ಊರಿಗೆ ಬಂದಾಗ ಉಪ್ಪಿನ ನೆಲ್ಲಿಕಾಯಿ ಕೊಡದೆ ಹೋದರೆ ನಿನ್ನ ಮನೆಗೆ ಧಾಳಿ ಇಡುವೆ... ಪ್ರೀತಿಯಿಂದ...
ಸ್ನೇಹಿತೆ.
ಚಂದ್ರಿಕಾ ಹೆಗಡೆ
ಅಕ್ಕ ಹಂಗೆ ದಾಳಿ ಇಟ್ಟಾಗ.. ನನಗೂ ಸ್ವಲ್ಪ್ ತಗಂಡು ಬಾರೆ.. ನಿನ್ನ ಈ ಲೇಖನ ಓದಿ.. ನನ್ನ ವಿದ್ಯಾರ್ಥಿ ಜೀವನ ನೆನಪಗ್ತಿದ್ದು.. ಅದರಲ್ಲೂ ಹೈ ಸ್ಕೂಲ್ ಜೀವನ.. ಕ್ಲಾಸ್ ಅಲ್ಲೇ ಕುತ್ಕಂಡು.. ದಾರಿಯಲ್ಲಿ ಬರ್ತಾ.. ಅಥವಾ.. ಗೆಳೆಯರ ಮನೆಯಿಂದನೋ... ಇಲ್ಲಾ.. ನಮ್ಮ ಮನೆ ಇನ್ದನೋ ತಂದ. ನೆಲ್ಲಿ ಕಾಯಿ.. ಹಲಗೆಹಣ್ಣು , ಮುಳ್ಳು ಹಣ್ಣು..ಜಂಬೆ.. ಪುನ್ನೆರಳ..ಪೇರಳೆ, ಅದು ಅಲ್ಲದೆ.. ಚಕ್ಕಲಿ.. ಎಲ್ಲಾ ಆ ಕಾಲಕ್ಕೆ ತಕ್ಕಂಗೆ.. ಸ್ಕೂಲ್ ಬ್ಯಾಗ್ ಸೇರಿ ಇರ್ತಿತ್ತು.. ಅದನ್ನ ಕ್ಲಾಸ್ ಅಲ್ಲಿ ತಿನ್ತಿದ್ದ್ಯ..ಅದೆಲ್ಲ .. ನೆನಪಾಗಿ.. ಬಾಯಲ್ಲಿ ನೀರು.. ಬರ್ತಿದ್ದು.. ಇವೆಂತ ಹೆಣ್ಣ ಮಕ್ಕಳಂಗೆ ಮಾತಾಡ್ತಾ ಅಂದ್ಕಲದ.. ಹೆಣ್ಣ ಮಕ್ಕ ಒಂದೇ ತಿನ್ನದು ನೋಡ್ಕಂಡು.. ನಾವು ತಿನ್ನ ಹೇಳಿ ಕಲ್ತಿದ್ದು.. ಅದು ಅಲ್ಲದೆ.. ಕಡೆ ಕಡೆಗೆ.. ಅವಕಗೆ. ಹೊಟ್ಟೆ ಉರಸವು ಹೇಳೇ ಎಲ್ಲಾ.. ನಂಗ ಕ್ಲಾಸ್ ಅಲ್ಲಿ ತಿಂತಿದ್ಯ.. ಓಹೋ ಎಂತ ಮಧುರ ಕ್ಷಣಗಳು..
ಪ್ರತ್ಯುತ್ತರಅಳಿಸಿಹುಂ...ನಂಗೆ ಒಂದೊಂದು ಸಲ ಅನ್ಸ್ತು ತಿರುಗಿ ಬರಬಾರದೇ ಬಾಲ್ಯ ಅಂಥಾ...
ಪ್ರತ್ಯುತ್ತರಅಳಿಸಿಚಂದ್ರಿಕಾ ಅವರೇ,
ಪ್ರತ್ಯುತ್ತರಅಳಿಸಿಬಾಯಿಯಲ್ಲಿ ನೀರು ಸುರಿಯುತಿತ್ತು ನಿಮ್ಮ ಲೇಖನ ಓದಿ :)
ನೆಲ್ಲಿಕಾಯಿ ಮಹಿಮೆ ಮೆಲ್ಲಿದವರಿಗೆ ಗೊತ್ತು..
ಬಾಲ್ಯ್ದ ದಿನಗಳಿಗೆ ಮರಳಿ ಕರೆದೊಯ್ಯುದಿದ್ದಕ್ಕೆ ವಂದನೆಗಳು.
ಹೌದು ನಂಗು ಈ ಸಲ ಅದನ್ನು ಸವಿಯುವದಕ್ಕೆ ಆಗಲೇ ಇಲ್ಲ,, ಅದಕ್ಕೆ... ಗೆಳತಿಗೆ ಹೇಳಿದ್ದೇನೆ ಮುಂದಿನ ಸಲ... ನನ್ನ ಪಾಲಿಗೂ ನೆಲ್ಲಿಕಾಯಿ ಬೇಕು ಅಂಥಾ
ಪ್ರತ್ಯುತ್ತರಅಳಿಸಿಬೆಟ್ಟದ ನೆಲ್ಲಿ, ಸಮುದ್ರದ ಉಪ್ಪು ಎತ್ತಣದೆತ್ತಣ ಸಂಬಂಧ ಎಂದಂತಹ ಅಲ್ಲಮನು ಬಹುಶಃ ಉಪ್ಪು ಹಾಕಿದ ನೆಲ್ಲಿಕಾಯಿಯ fan ಇರಬಹುದೇನೊ? ನಿಮ್ಮ ಲೇಖನವೂ ಸಹ ಉಪ್ಪು ಹಾಕಿದ ನೆಲ್ಲಿಕಾಯಿಯಂತೆ ರುಚಿಯಾಗಿದೆ.
ಪ್ರತ್ಯುತ್ತರಅಳಿಸಿಅದರಲ್ಲೂ ಮಲೆನಾಡಿಗರಾದ... ನಮಗೆ ಇಂಥಹ ಕಾಡಿನ ಉತ್ಪನ್ನಗಳೆಂದರೆ ಒಂಥರಾ ಪ್ರೀತಿ!..
ಪ್ರತ್ಯುತ್ತರಅಳಿಸಿವಾವ್ ಬಾಯಿ ನೀರೂರಿತು ... ಉಪ್ಪಲ್ಲಿ ಹಾಕಿದ ನೆಲ್ಲಿಕಾಯಿ ರುಚಿ ತಿಂದವನೇ ಬಲ್ಲ !
ಪ್ರತ್ಯುತ್ತರಅಳಿಸಿಅಯ್ಯೋ ಆಸೆ ಅಗ್ತಾ ಇದ್ದು... ಉಪ್ಪಲ್ ಹಾಕಿದ ನೆಲ್ಲಿಕಾಯಿ ಆಹಾ!!!
ಪ್ರತ್ಯುತ್ತರಅಳಿಸಿsari elru seri oora kadege dhaali maaduva,....
ಪ್ರತ್ಯುತ್ತರಅಳಿಸಿsuper baradye koose
ಪ್ರತ್ಯುತ್ತರಅಳಿಸಿkhushi aatu
ಧನ್ಯವಾದ.... ನಿರಂತರ ಕೆಲಸದ ನಡುವೆಯೂ ಓದಿದ್ದಕ್ಕೆ...
ಪ್ರತ್ಯುತ್ತರಅಳಿಸಿwow mouth watering, school days nenpagtha ide.Chennagiddu article:)
ಪ್ರತ್ಯುತ್ತರಅಳಿಸಿhttp://cookwell.tk/
hum... prabhaa.... nanguvaa.... enta maadudu sezn muguddu... adke jam tintaa idde!
ಪ್ರತ್ಯುತ್ತರಅಳಿಸಿಓದಿ ನ೦ಗೂ ಎಲ್ಲರಿಗಾದ್ ಕಥೆನೆ ಆತು..ಬಾಯಲ್ಲಿ ನೀರ್ ಬ೦ತು..ಉಪ್ಪ್ ನೆಲ್ಲಿಕಾಯಿ ಇಲ್ಲೆ..:(
ಪ್ರತ್ಯುತ್ತರಅಳಿಸಿಹೌದು... ನೆಲ್ಲಿಕಾಯಿ ಮಹಿಮೆ!
ಪ್ರತ್ಯುತ್ತರಅಳಿಸಿಬಾಯಲ್ಲಿ ನೀರ್ ಬ೦ತು.. Madam
ಪ್ರತ್ಯುತ್ತರಅಳಿಸಿaldaa?
ಪ್ರತ್ಯುತ್ತರಅಳಿಸಿhmmmmmm...uppina nellikai yella eega bari nenapu madkala...alda?
ಪ್ರತ್ಯುತ್ತರಅಳಿಸಿtinno articles, specially pakka malenaadina items ella, with photos dayavittu bareebeeda maarayti, alli bari nellikaayadru sigutte, illi adoo illa :-(((((((((. eegale tinnabeeku annista ide..... :-)
ಪ್ರತ್ಯುತ್ತರಅಳಿಸಿhum... anu... nenpu onde alla sigtu bekaadre... innu oorugagalli... naave oor bittu inthalli bandiddu!
ಪ್ರತ್ಯುತ್ತರಅಳಿಸಿhey suman hostelnalli tinnudu... nenpaaytene...
ಪ್ರತ್ಯುತ್ತರಅಳಿಸಿidi netherland huduki nodu elladru sigbahudu...
illa indiakke bandaaga helu ellindaadru naavibru tandu edruge raashi haaki tinnona!
thumba cholo iddu. Nangu namma chikkandina nenpu bantu
ಪ್ರತ್ಯುತ್ತರಅಳಿಸಿalvaa parvathi...
ಪ್ರತ್ಯುತ್ತರಅಳಿಸಿ