02 ಮಾರ್ಚ್ 2011

ಬೆನ್ಹತ್ತಿ ಬರುವ ಸಂಗತಿಗಳು....2



ನನಗೆ ನಮ್ಮೂರೇ ಚೆಂದ. ಆ ವಾತಾವರಣದ ಮುದ-ಹದ , ಪದಗಳಲ್ಲಿ ಹಿಡಿದಿಡಲು ಅಸಾಧ್ಯ. ನೀವು ಗಿಜಿಗುಟ್ಟುವ ನಗರದವರೆ? ನಿಮಗೆಲ್ಲಿ ಅರ್ಥವಾಗಬೇಕಿದೆ ಇದೆಲ್ಲ? " ರಜದಲ್ಲಾದರೂ ಹಳ್ಳಿಯ ಮಜಾ ಪಡೆಯಿರಿ" ಎಂಬ ಫಲಕ ನಿಲ್ಲಿಸಲೇ? ನನಗಿಷ್ಟವಿಲ್ಲ ಅದೆಲ್ಲ! ನೀವು ನಮ್ಮೂರಿಗೆ ಬರುವಾಗ ನಿಮ್ಮೊಟ್ಟಿಗೆ ತರುವ ಪ್ಲಾಸ್ಟಿಕ್ ..  ರೆಡಿ ಟು eat ..... ಅದರ  ಉಳಿದ ಬಳಿದ .... ಕಸಗಳು.... ನಾವೆಲ್ಲಿಡಬೇಕು. ನಿಮ್ಮಲ್ಲಿರೋ ಹಾಗೆ  ನಮ್ಮೂರಲ್ಲಿ ಕಸದ ತೊಟ್ಟಿ ಇಲ್ಲ... ನಾವು ಇಂಥಹ ಕಸಗಳನ್ನು  ಸೃಷ್ಟಿಸುವದೆ  ಇಲ್ಲ.  ಅಂದ ಹಾಗೆ , ನೀವು ತರಕಾರಿ , ಎಲೆ , ಸೊಪ್ಪುಗಳನ್ನು " waste " ಎಂಬ ಫಲಕದ ಕೆಳಗೆ ಬಿಸ್ಸಾಕುತ್ತೀರಂತೆ!  ಕೇಳಿದ್ದು ನಾನು ಬೇಸರಿಸಬೇಡಿ ಹಾ.... ನಿಮಗೇನು ತಿಳಿದಿದೆ ನಮ್ಮ ಎಮ್ಮೆ ,ಆಕಳು ... ಇವುಗಳಿಗೆಲ್ಲ ಅವೆಂದರೆ ಪಂಚ ಪ್ರಾಣ! ..... ಊಊಉಯ್  ಆಕಳು ಎಮ್ಮೆ , ಎಂದ ಕೂಡಲೆ ಸೆಗಣಿ ವಾಸನೆ ಎಂದು ಮೂಗನ್ನೇಕೇ  ಮುಚ್ಚಿಕೊಂಡಿರಿ ? ನಮ್ಮ ಮನೆಯ ನೆಲವನ್ನು  ಅದರಿಂದಲೇ ಸ್ವಚ್ಚಗೊಳಿಸುವದು. ಆ ನೆಲದ ಮೇಲೆ ಕುಳಿತು ಒಂದು ಇಷ್ಟವಾದ ಹಾಡನ್ನು ಗುಂಗುನಿಸುವ ಅವಕಾಶ ನಿಮಗೆಲ್ಲಿದೆ? ನೀವು ಮೋಸಾಯ್ಯಿಕ್ ನೆಲದ ಮೇಲೆ ನಡೆದಾದ ಹೋಗಿ ಜಾರಿರುತ್ತೀರಿ.!
                  ಏನೋ... ಕೇಳಿದ ಹಾಗಿತ್ತಲ್ಲ ... ಅಲ್ಲೆಲ್ಲೋ ನೀರಿನ ಆಟವನ್ನು ನೋಡುತ್ತಿರಂತೆ?  ಪ್ಲಾಸ್ಟಿಕ್ ಬಂಡೆಗಳ ಮೇಲೆ ವಿದ್ಯುತ್ ಸಂಪರ್ಕದಿಂದ ನೀರು ಬೀಳುವದನ್ನು ... ನಿಮ್ಮ taste ಗೂ ನಿಮ್ಮ ಕಣ್ಣಿಗೂ ನಮಸ್ಕಾರ.. ಅದೇನು.. ಹಸಿರು ಕೆಂಪು ಪ್ಲಾಸ್ಟಿಕ್ ಹಾಳೆಗಳ ಮೇಲೆ  ಜಾರುತ್ತ  ಮಜಾ ಅನುಭವಿಸುತ್ತಿರೀ?  ಹೇ... ನಿಮ್ಮ ... ನಮ್ಮೂರಿನ ನದಿ ಹಳ್ಳ, ತೊರೆ,, ಝರಿ ...ನೋಡ ಬೇಕೂ ..... ಅಡಿಕೆ ಹಾಳೆಗಳ ಮೇಲೆ ಕುಳಿತು ಇಳಿಜಾರಿನಲ್ಲಿ ಜಾರುತ್ತ ಹೋಗಲೂ ಧೈರ್ಯ  ಬೇಕು. ಪುನರ್ಪುಳಿ ಎಲೆಗಳ ನಡುವೆ ಒಂಚೂರೂ ಉಪ್ಪು ಇಟ್ಟು ಸವಿಯಲು ಆ ಬಾಲ್ಯವೇ ಬರಬೇಕು. ಹಸಿ ತೆಂಗಿನ ಗರಿಯಲ್ಲಿ  " watch " ಮಾಡಿ ಕೊಡಲೂ ಅಂದಿನ ಸ್ನೇಹಿತರೇ ಬರಬೇಕು...
                                                                                 ನಮ್ಮುರಲ್ಲನ್ತೂ ಮಾತಿಲ್ಲ!  ಅದೇನೂ ಮಾತಿಲ್ಲದ ಊರು ಅದ್ಯಾವ ಊರು ? ವಿಚಿತ್ರಪಾ ಅಂತ ಹೇಳಿ ... ಭಯ ಬೀಳಬೇಡಿ.... . ಅಂದ್ರೆ ನಮ್ಮೂರಲ್ಲಿ ನೀವು ಈಗ ಮಾತಾಡ್ತಾ ಇದ್ದಿರಲ್ಲ ... ಕಿವಿ ಹತ್ರ ಅದೇನೋ ವಸ್ತು ಇಟ್ಟು < ಮೊಬೈಲ್ ಅಂತೆ> ,,, ಸುಮ್ಮ ಸುಮ್ಮನೆ  ನಗ್ತಾ , ನಾಚಿಕೊಳ್ತಾ, ಕೈ, ಬಾಯಿ , ಮಾಡ್ತಾ ಇರೋದು, ಇವೆಲ್ಲ ನಮ್ಮೂರಲ್ಲಿ ಇಲ್ಲಾ... ನಾವು  ಪಕ್ಕದ ಮನೆಯವರ ಹತ್ತಿರ ಮಾತನಾಡಬೇಕು ಅಂದ್ರೆ ಹೇ,,, ಹೋ... ಓಯ್,,, ಕೂಹೂ.. ಏ, ,,,, ಇವುಗಳನ್ನೇ,, ಬಳಸೋದು.  ಏನಂದ್ರೂ ನಮ್ಮೂರಲ್ಲಿ ಏಕಾಂತ ಇದೇರಿ. ನಿಮ್ಮೂರಲ್ಲಿ ಎಷ್ಟು ದುಡ್ಡು ಕೊಟ್ರು ಇದು ಸಿಗೊದಿಲ್ಲಂತೆ !. ಈಗ ನಿಮ್ಮೂರಿಗೆ ನಾನು ವಿಚಿತ್ರ ಊರು ಅಂತ ಹೇಳಬೇಕಾಯಿತು.
                          .............. ಏನೋ ತಮ್ಮೂರನ್ನು ಹೊಗಳಿಕೊಂಡು ಇದೆಲ್ಲ ಹೇಳ್ತಾ ಇದಾಳೆ ಅಂತ ಅಸಡ್ಡೆಯಿಂದ ಕೂಡ ಬೇಡಿ. ನಮ್ಮ ಹಳ್ಳಿ ನಿಮ್ಮೂರ < ಈಗ ಯಾರನ್ನು ಕೇಳಿದ್ರು ಬೆಂಗಳೂರು .....>ಹಾಗೆ ಆಗ್ತಾ ಇದೆ ಅನ್ನೋದು ನನ್ನ ಈ  ವಿಚಾರಕ್ಕೆ ಕಾರಣ .

                         ಇನ್ನೂ... ಇದೆ...
ಚಂದ್ರಿಕಾ ಹೆಗಡೆ

8 ಕಾಮೆಂಟ್‌ಗಳು:

  1. ಚಂದ್ರಿಕಾ....
    ಸೂಪರ್.....
    ನನ್ನ ಬಾಲ್ಯದ ದಿನಗಳನ್ನು ಮತ್ತೊಮ್ಮೆ ಮೆಲುಕು ಹಾಕುವಂತೆ ಮಾಡಿದ್ದೀರಿ
    ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  2. ಚಂದ್ರಿಕಾ,
    ನಿಸರ್ಗಸಹಜ ವಾತಾವರಣಕ್ಕೂ, ನಗರಜೀವನದ ಕೃತಕತೆಗೂ ಇರುವ ವ್ಯತ್ಯಾಸವನ್ನು ಹೃದಯಂಗಮವಾಗಿ ಹೇಳಿದ್ದೀರಿ.

    ಪ್ರತ್ಯುತ್ತರಅಳಿಸಿ
  3. ಹೌದು, ಹಳ್ಳಿಯೇ ಚೆಂದ. ನಿಮ್ಮ ಬರಹ ಓದುತ್ತ ಇದ್ದಂತೆ ನಾವೂ ಒಮ್ಮೆ ಆ ವಾತಾವರಣಕ್ಕೆ ಹೋಗಿ ಬಂದಂತಾಗುತ್ತೆ. ಬಾಲ್ಯ ನೆನಪಿಸಿದ್ದಕ್ಕೆ ಥ್ಯಾಂಕ್ಸ್.

    ಪ್ರತ್ಯುತ್ತರಅಳಿಸಿ
  4. ಚಂದ್ರಿಕಾ...
    ಅಂಥ ಚಂದ ಊರಲ್ಲಿ ಹುಟ್ಟಿದ್ದಕ್ಕೇ ಇರಬೇಕು, ಇಷ್ಟು ಚೆಂದಾಗಿ ಬರೀತೀರಿ.
    ಅಲ್ಲಿನ ಮಣ್ಣು,ಆ ಪರಿಸರದೊಳಗೆ ಅರಳಿಕೊಳ್ಳೋ ಭಾವರಸವೇ ಪ್ರತಿ ಸಲವೂ ಹೊಸತು, ಹಸಿ ಹಸಿತು. ಇಷ್ಟವಾಯ್ತು, ಬರೀತಿರಿ.


    ಪ್ರೀತಿಯಿಂದ,
    -ಶಾಂತಲಾ ಭಂಡಿ

    ಪ್ರತ್ಯುತ್ತರಅಳಿಸಿ
  5. ಚಂದ್ರಿಕಾರವರೆ..

    ಕಾಂಕ್ರೀಟ್.. ಪ್ಲಾಸ್ಟಿಕ್ ನಗರಗಳಲ್ಲಿ ಮಣ್ಣುಗಳು..
    ಹಸಿರು ಕಾಣುವದು ಕಡಿಮೆ...
    ಜನರೂ ಕೂಡ ಪ್ಲಾಸ್ಟಿಕ್ ಆಗಿಬಿಡುತ್ತಾರೆ.. ಮಾನಸಿಕವಾಗಿ...

    ಚಂದದ ಲೇಖನಕ್ಕೆ ಅಭಿನಂದನೆಗಳು..

    ಪ್ರತ್ಯುತ್ತರಅಳಿಸಿ
  6. ಚಂದ್ರಿಕಕ್ಕ..
    ಎಲ್ಲಾ ಚೆಂದ.. ನಿಮ್ಮೂರು ಚೆಂದ.. ನಿಮ್ಮ ಲೇಖನನು ಚೆಂದ.. ನಮ್ಮೂರು ಚೆಂದ.. ಹುಂ ನಿಜವಾದ ನೆಮ್ಮದಿ.. ಆ ಸಂತೋಷ ನಿಷ್ಕಲ್ಮಶ ನಗು..ಮಾತು.. ನಮ್ಮವರು ಹೇಳ ಬಾವ.. ಜೊತೆ ಜೊತೆಗೆ ಸಣ್ಣ ಸಣ್ಣ ಕಾರಣಕ್ಕೆ.. ಪ್ರೀತಿಯ ಕಾದಾಟ.. ಇವೆಲ್ಲ.. ಸಿಗಬೇಕು ಅಂತ ಅಂದ್ರೇ..ಅದು.. ನಮ್ಮಗಳ ಹುಟ್ಟುರೆ ಆಗಬೇಕು..
    ನಿಮ್ಮ ಹವಿ ಹುಡುಗ..
    ~ಕಮಲು~

    ಪ್ರತ್ಯುತ್ತರಅಳಿಸಿ
  7. @.ಎಸ್.ಬಿ. ಅಗ್ನಿಹೋತ್ರಿ & ಶಾಂತಲಾ ಭಂಡಿ& ಸಿಮೆಂಟು ಮರಳಿನ ಮಧ್ಯೆ& ಕಮಲಾಕರ ಭತ್ತಗೆರೆ..... kaledukonda hantadalle gottaguvadu kaleda aa vastu.. vyakti.. samaya... ooru... ivugala mahatva!... aadru... nee elliruvadakke ishtapadtiyaa andre elraddu... nagarave!.... viparyasa nodi!

    ಪ್ರತ್ಯುತ್ತರಅಳಿಸಿ