28 ಫೆಬ್ರವರಿ 2011

ಕಾರಣ ಗೊತ್ತಿಲ್ಲ !

   ಸುಮಾರು  ೧೪-೧೫ ವರ್ಷಗಳ ಹಿಂದಿನ ಮಾತು ...
 ಪ್ರೌಢ  ಶಾಲೆಯ ದಿನಗಳ  ನೆನಪು...
ನನಗಂತೂ 'ಹುಡುಗರು' ಶತ್ರುಗಳಂತೆ ಆಗಿದ್ದರು. ಕಾರಣ? ಹುಡುಗರ ಹತ್ತಿರ ಮಾತನಾಡಲು ಒಂದಿನಿತೂ ಭಯವಿರಲಿಲ್ಲ. ಮಾತನಾಡಿದ್ದೆ ೧೦-೧೨ ಸಲ! 
ಕಾರಣ ಕೇಳಿದರೆ ಗೊತ್ತಿಲ್ಲ!
ನಾನು ಯಾವಾಗಲೂ cultural champion ಆಗಿರ್ತಾ ಇದ್ದೆ. ಅದೆಷ್ಟೂ ಮೊದಲುಗಳ ಒಡತಿಯಾಗುತ್ತಿದ್ದೆ.  ಆದರೆ ಇಂಗ್ಲಿಷ್  ಭಾಷಣ ಹಾಗು ಪ್ರಬಂಧದಲ್ಲಿ ಮಾತ್ರ ಎರಡೋ ಮೂರನೆಯದೋ ಸ್ಥಾನ!  ಅದೇನೂ ನಿನಗೆ ಎಲ್ಲ ಸಿಗಬೇಕಾ ಅಂಥಾ ಕೇಳಬೇಡಿ?  ಏಕೆಂದರೆ  ಎಲ್ಲರೂ ಒಪ್ಪಿಕೊಳ್ಳೋ ಸತ್ಯವಾಗಿತ್ತೂ... ಏನೆಂದರೆ ನನ್ನ ಅಮ್ಮ ಅಲ್ಲಿ ಇಂಗ್ಲಿಷ್ ಟೀಚರ್ ... ಏನಾದರೂ ನನಗೆ ಮೊದಲ ಸ್ಥಾನ ನೀಡಿದರೆ  ತನ್ನ ಮಗಳಿಗೆ  ತಾರತಮ್ಯ ಮಾಡಿ ಕೊಟ್ಟಳು ಎಂಬಾ ಅಪವಾದಕ್ಕೆ ಗುರಿಯಾಗಬೇಕಲ್ಲ!  ಆದ್ರೆ ನನ್ನ ಮನಸ್ಥಿತಿ ಹೇಗಿರಬಹುದು.... ಇದು ದೂರಲ್ಲ! 
ಅಬ್ಭಾ! ನನ್ನ ಉತ್ತರ ಪತ್ರಿಕೆಗಳಿಗೆ ಅದೆಷ್ಟು ಬೇಡಿಕೆ? ತೂಗಿ ಅಳೆದು ನೋಡಲು! ಎಲ್ಲಾದರೂ ಮಾರ್ಕು ಹೆಚ್ಚಿಗೆ ಹಾಕಿದ್ದರಾ ಅಂಥಾ... ಅದೇನೂ ಪರೀಕ್ಷೆಯ ಆಸಕ್ತಿ ಕಳೆದುಕೊಳ್ಳಲು ಇದೊಂದೂ ಕಾರಣನಾ?  ಯಾಕೆಂದ್ರೆ ಅಂಥಾ ಜೊತೆಗಾರರು ನನ್ನಿಂದ ದೂರವಾದ ಮೇಲೆ ನಾನು ಪರೀಕ್ಷೆಯಲ್ಲಿ ಇವತ್ತಿನವರೆವಿಗೂ ಅತ್ಯಾಸಕ್ತಿ ಹೊಂದಿರುವದು!  ಈ ಎಲ್ಲ ಕೆಲಸಗಳು ಹುಡುಗಿಯರದ್ದೇ.ಹುಡುಗರದಲ್ಲ.ಆದರು ಅವರ ಹತ್ತಿರ ಮಾತನಾಡುತ್ತಿರಲಿಲ್ಲ!
ಗಣಿತದ ವಿಷಯದಲ್ಲೂ ಅಷ್ಟೇ ... ನಾನು ಇದರಲ್ಲಿ ಸ್ವಲ್ಪ ಹಿಂದೆ... ಪ್ರಯತ್ನ ವಿಲ್ಲದ  ಹಿಂದೆ ಬೀಳುವಿಕೆ.. ಹಾಗಂತಾ ೬೦-೬೫  ಯಾವಾಗಲೂ... ನನ್ನ ಅಪ್ಪ ಗಣಿತವನ್ನು ಹೇಳಿಕೊಡುತ್ತಿದ್ದರು.. ಬೋರ್ಡ್ ನಲ್ಲಿ ಗಣಿತವನ್ನು ಬಿಡಿಸಲು ಹೇಳಿದಾಗ ನಾನು ತಲೆಕೆರೆಯುವದೆ! ಹುಡುಗರು ಹಿಂದಿನಿಂದಲೇ  ಹೇಳಿಕೊಡುತ್ತಿದ್ದರು.. ಗ್ರಹಿಸಿ ನಾನು ಬಿಡಿಸುತ್ತಿದ್ದೆ ಇದು ಇಂದಿಗೂ ನನ್ನ ಅಪ್ಪನಿಗೆ ನಂಬಲಾರದ ಸತ್ಯ!ಆದರೂ ಅದೇಕೆ ಅಸ್ಟು ದ್ವೇಷ  ಕಾರಣ ಗೊತ್ತಿಲ್ಲ. 
ಮಾತನಾಡುತ್ತೇನೆ.. ಈಗ ಸಿಕ್ಕಾಗಲೆಲ್ಲ. ಕೆಲವೊಬ್ಬರು ಇಂದಿಗೂ ಆಶ್ಚರ್ಯ ಪಡುತ್ತಾರೆ. ಇವಳು  ಅದ್ಹೇಗೆ ಬದಲಾದಳೆಂದು? ಇನ್ನು ಕೆಲವರು ಸಿಗಬೇಕು... ನಾನು ಅವರ ಹತ್ತಿರಾ ಹರಟಬೇಕು... ಅವರ ತಲೆಯಲ್ಲಿ ಹುಳ ಬಿಡಬೇಕು... 
ಮಾತನಾಡಿಸುತ್ತೇನೆ ನನ್ನ ಮೇಲೆ ಯಾವ ಕೆಟ್ಟದೃಷ್ಟಿಯಿಂದಲೂ ನೋಡದ  ಆ ಹುಡುಗರನ್ನು!

                                ಕಾರಣದ ಹುಡುಕಾಟ ಬಿಟ್ಟು...
                                ಚಂದ್ರಿಕಾ ಹೆಗಡೆ


6 ಕಾಮೆಂಟ್‌ಗಳು:

  1. hum akka.. aanthu nimagoo high school dina nenapu madsdi.. ya.. nivu heladrallu nija iddu.. entke heli gottile.. aa avadinalli.. aa jagadalli nimma hage yare iddru.. avarige ade anubhava aagtittu.. In fact bejaragadi.. adara badalu.. adu nimmanna.. mattu.. gatti madchu antane helalakku.. just like Purnachandra Tejasvi.. alda.. aadru.. avella ivaga neneskandre.. sakat khusi aagtu.

    ಪ್ರತ್ಯುತ್ತರಅಳಿಸಿ
  2. ಜೀವನವೇ ಹೀಗೆ! ಅನೇಕ ಸಂಗತಿಗಳಿಗೆ ಕಾರಣವೇ ಸಿಗುವದಿಲ್ಲ. ಅದರಲ್ಲಿಯೇ ಇರೋದು ಮಜಾ! ಲೇಖನ ಚೆನ್ನಾಗಿದೆ.

    ಪ್ರತ್ಯುತ್ತರಅಳಿಸಿ
  3. ಡಾ. ಚಂದ್ರಿಕಾ,,ನನ್ನ ಹಾಗೇ ನೀವು ಡಾಕ್ಟರ್ ಅಲ್ಲ ಅಂದ್ಕೋತೀನಿ,,,ಹಹಹ..ಆಶ್ಚರ್ಯವಾ...ಹಾಗಾದ್ರೆ ನನ್ನ ಬ್ಲಾಗ್ ನನ್ನ ಪ್ರೊಫೈಲ್ ನೋಡಿ..ಹುಳ ಬಿಟ್ಟೆ ಅಲ್ಲವಾ... ಹಹಹ ಇದೇ ನೋಡಿ ನಾವು ಬ್ಲಾಗಿಗಳು ಮಾಡೋ ಮೊದಲ ಕೆಲಸ ...ಚನ್ನಾಗಿದೆ ಚಿಕ್ಕ ಮನ ಬಿಚ್ಚಿದ ಪರಿಚಯ.

    ಪ್ರತ್ಯುತ್ತರಅಳಿಸಿ