10 ಫೆಬ್ರವರಿ 2011

ಮುಗಿದ ಕಾಯುವಿಕೆ




ಆಕೆ ಕಂಗೆಟ್ಟಿದ್ದಾಳೆ_
ಕಾಳ ರಾತ್ರಿಯ ಆಗಮನವಾದಂತೆಲ್ಲಾ 
ಕಣ್ ಕಟ್ಟಿವೆ...
ಕಣ್ಣ ಗೊಂಬೆ ಮಸುಕಾಗುತ್ತಲೇ 
ತಳಮಳದ ಒಡಲಾಗ್ನಿ 
ಕುದಿ ಕುದಿವ ಮನವಿರಲು 
ತಿಂದ ತಿನಿಸು , ಕಂಡ ಕನಸುಗಳೆಲ್ಲಾ 
ಕ್ಷಣಾರ್ಧದಲ್ಲೇ  ಭಗ್ನ !
ಕಪೋಲಗಲೆರಡರಲ್ಲಿ  ಕಣ್ಣೀರಿನ 
ಒರತೆ? ಕಾಣುವ ಲಕ್ಷಣವಿಲ್ಲ. 
ಬತ್ತಿದೆ- ಅದರ ಛಾಯೆ 
ಮಸುಕಾದ ಸೆರಗ ತುದಿ ಕೈಯಲ್ಲಿ 
ಛಾಯೆ ತೊಡೆಯುವ ಯತ್ನ!

ಮಡಿಲ ಕೂಸಿನ ಉಸಿರು, ಆಹಾರ 
ಸಿಗತೊಡಗಿದೆ ಯಾಂತ್ರಿಕ 
ಜೋಪಾನದಲ್ಲೂ ...
ನಲಿದಾಟ ನೆನಪಿನಲ್ಲಿ 
ಪ್ರೀತಿಯಿದೆ ಮನ-ಮಗುವಿನಲ್ಲಿ 
ಅನುರಾಗ ಸ್ಪಂದನಕೆ ಜಾಗವೆಲ್ಲಿ ಇನ್ನು? 
ಮಗು ಮಿಸುಕಾಟ ಭಾಗ್ಯ 
ನೆಮ್ಮದಿ ಇದರಲ್ಲಿ 
ಹುಡುಕಾಟ... ಇನಿಯನ ಆಸರೆ ಇನ್ನೆಲ್ಲಿ?
ಗುಂಡು ಸದ್ದಿನ ಮಾಯೆ 
ಹೋದ ಗಂಡನ ನೆನಪು 
ಗೋಳು ಕೇಳುವ ಜನಕೆ ಪುರುಸೋತ್ತೆಲ್ಲಿ?
ಕಡುಗಲಿಯ ನೆನಪು ಮಾತ್ರಾ ಆಕೆಯಲ್ಲಿ....

                                                    ಕಡುಗಲಿಗಳ ನೆನಪಿನಲ್ಲಿ ಇರುವ ಎಷ್ಟೋ ಸ್ತ್ರೀಯರಿಗೆ ಈ ಕವನ ಅರ್ಪಣೆ ..
                                                         ಚಂದ್ರಿಕಾ ಹೆಗಡೆ 

6 ಕಾಮೆಂಟ್‌ಗಳು:

  1. nimma taanakke modala bheti...kavana bhaava purna vagide.. nija...samaya da abhaavennutta..esto jeevana moulya galige tilaanjali..bittu bidutteve.. uttma vichaara...

    shubhashayagalu
    ananth

    ಪ್ರತ್ಯುತ್ತರಅಳಿಸಿ
  2. ಪ್ರೀತಿಯಿದೆ ಮನ-ಮಗುವಿನಲ್ಲಿ
    ಅನುರಾಗ ಸ್ಪಂದನಕೆ ಜಾಗವೆಲ್ಲಿ ಇನ್ನು?
    ತುಂಭಾ ಇಷ್ಟವಾದವು.ಥ್ಯಾಂಕಸ

    ಪ್ರತ್ಯುತ್ತರಅಳಿಸಿ
  3. ಸು೦ದರವಾದ ಕವಿತೆ.. ಮನಸ್ಸಿಗೆ ನಾಟಿತು..
    ..ಬರೆಯುತ್ತಿರಿ..

    ನನ್ನ ಚಿತ್ತಾರದರಮನೆಗೆ ಭೇಟಿಯಿತ್ತಿದ್ದಕ್ಕೆ ವ೦ದನೆಗಳು.

    ಪ್ರತ್ಯುತ್ತರಅಳಿಸಿ