21 ಫೆಬ್ರವರಿ 2011

ನಗು !





ಕೆಲವೊಬ್ಬರಿರುತ್ತಾರೆ- ಗಂಭೀರ ಮುಖಭಾವ, ಅಲ್ಲಲ್ಲಿ ಕಿಂಚ್ಚಿತ್ತಾದರೂ ನಗು! ದೇವರಾಣೆಗೂ ದೊರೆಯುವದಿಲ್ಲ. ಹಲ್ಲು ಬೆಳ್ಳಗಿದೆಯೇ ಇಲ್ಲಾ ಇವತ್ತೇ ದಂತ ಚಿಕಿತ್ಸಾಲಯಕ್ಕೆ ಹೋಗುವ ಅನಿವಾರ್ಯತೆ ಇದೆಯೇ! ಉಹುಉಂ ತಿಳಿಯುವದೇ ಇಲ್ಲ. ಅಷ್ಟು ಬಿಗಿ ಬಂದೋಬಸ್ತ್. ಅವರ ಹತ್ತಿರ ಕೋಟಿಗಟ್ಟಲೆ ಹಣ ಕೊಳೆಯುತ್ತಿದ್ದರೂ ನಗುಸುವಾಸನೆ ಹತ್ತಿರವೂ ಸುಳಿಯುವದಿಲ್ಲ. ಗಂಭೀರವೋ , ಭಯವೋ , ಅಥವಾ ಹಿಂಜರಿಕೆಯೋ... ಒಟ್ಟಿನಲ್ಲಿ ನಮ್ಮಂಥಹವರು ಅವರಿಗೊಂದು ಹೆಸರು"ಸುಡು ಸುಡು ಮುಖದವನು... ಒಂದು ಚೂರು  ನಗು ಹುಟ್ಟೋದಿಲ್ಲ, ಒಣ ಮುಖ" ಎನ್ನುತ್ತೇವೆ.
ಬಹಳಷ್ಟು  ಜನರಿರುತ್ತಾರೆ_ ನಗು ಮುಖ, ಹಲ್ಲು ಬೆಳ್ಳಗಿರಲಿ, ಅಥವಾ ಹಿಂದಿನ ವರ್ಷವೇ  ದಂತ ವೈದ್ಯರ ಹತ್ತಿರ ಹೋಗಬೇಕಿತ್ತು ಎಂಬ  ಅನಿವಾರ್ಯತೆ ಇದ್ದರೂ ಮುಖದಲ್ಲಿ ಒಂದಷ್ಟು ನಗು ಚಿಮ್ಮಿಸುತ್ತಾರೆ... ಪರಿಚಯದ ನಗು, ಮಂದಹಾಸ, ಇವರನ್ನು ನೋಡಿದರೆ ಇನ್ನಷ್ಟು ಮಾತನಾಡಬೇಕೆಂಬ ಬಯಕೆ... ಏನೋ ಆತ್ಮೀಯತೆ-ಸಲುಗೆ, ಭಾವನೆಯ ಹಂಚುವಿಕೆ, ಭಾವುಕತೆಯ ಕ್ಷಣ .... ಹೀಗೆ ಸ್ನೇಹತ್ವದ ಗುರುತು. ಇಂತಹವರ ಹತ್ತಿರ ಏನೇನೂ ಹಿಂಜರಿಕೆಯಿಲ್ಲ. ನಗುವ - ದುಃಖ ಶಮನಗೊಳಿಸುವ  ಮನಸು ಇವರದು.
ಗಂಭೀರ ವದನದ ಹೆಸರನ್ನು ಹೊತ್ತ ಕೆಲವರು.... ಸೂಕ್ಶ್ಮವಾಗಿ ಇನ್ನೊಬ್ಬರನ್ನು ಗಮನಿಸುತ್ತಾ ಅವರ ಹಿಂದಿನಿಂದ  ಆಡಿಕೊಳ್ಳುತ್ತಾರೆ. ಬೇಕಾದಲ್ಲಿ ಇಡಬೇಕಾದ"ಚುಚ್ಚುಗಳನ್ನು "ಆಳವಾಗಿಯೇ ನೆಟ್ಟಿರುತ್ತಾರೆ. ಬಿಚ್ಚುಮನಸಿಗರಲ್ಲದ ಇವರು ವಿಚಿತ್ರ.! ಹೀಗೆ ನಮ್ಮ ಪರಿಚಯದ ಒಬ್ಬ ಹೆಣ್ಣುಮಗಳು ಹೆಚ್ಚು  ಮಾತಾಡುವದಿಲ್ಲ. ಮುಖ ನಿರ್ಲಿಪ್ತವೋ , ಗಂಭೀರವೋ... ನಾ ಅಂದುಕೊಂಡಿದ್ದೆ ಅವಳ ಸ್ವಭಾವವೇ ಹೀಗೆ _ಅಷ್ಟು ಮಾತನಾಡುವದು ಇಷ್ಟವಾಗುವದಿಲ್ಲವೋ  ಏನೋ ಎಂದು.<  ಏಕೆಂದರೆ ನನ್ನ ಬಳಿ ಅವಳ ವರ್ತನೆ ಹೀಗೆ ಇತ್ತು. ನಾನು ಅವಳಿಗಿಷ್ಟವಿಲ್ಲವೆಂದು ಮುಂದೆ ಅವಳು ಸಿಕ್ಕಾಗೆಲ್ಲಾ ಹಾಯ್ ಎಂದು ಸುಮ್ಮನಿರುತ್ತಿದ್ದೆ. ಆಮೇಲೆ ಗೊತ್ತಾಯಿತು ಅವಳ ಸ್ವಭಾವ... ನನ್ನ ಬಗ್ಗೆ ಇಲ್ಲ ಸಲ್ಲದನ್ನು ಹೇಳಿ ಹೇಳಿ.... > ಸ್ವಾಮೀ ಅವಳು ಸುಮ್ಮನಿರುತ್ತಾಳೆ ಎಂಬುದು ಶುದ್ಧ ಸುಳ್ಳು. ಅವಳು ಒಮ್ಮೆ ಅವಳ ಸಂಬಂಧಿಕರಿಗೆ  <!> ಫೋನಾಯಿಸುವದನ್ನು ನಾನು ಗಮನಿಸಿದ್ದೆ. ಅದೆಷ್ಟು ಮಮಕಾರ, ಆತ್ಮೀಯ ಬೆಸುಗೆ, ನಗು-ಹಿತೈಷಿ.... ಅಂದಿನಿಂದ ಅವಳ ಬಗೆಗೆ ಕಾಲ ಹೇಳಬೇಕು ಎಂದುಸುರುತ್ತೇನೆ!
ಇನ್ನೂ ಕೆಲವರು ನಗುತ್ತಾರೆ, ಹಿಂದಿನಿಂದ ಬೇರೇನೋ ಆಡಿಕೊಳ್ಳುವರು. ಇವರಿಗೆ ದಂತ ಚಿಕಿತ್ಸೆಯ ಅವಶ್ಯಕತೆಯೇ ಇಲ್ಲ. ! ಅಯ್ಯೋ ಇಂಥವರನ್ನುಸುಖಾಸುಮ್ಮನೆ ಅವಲಂಬಿಸಬೇಡಿ. ನಿಮ್ಮ ಹತ್ತಿರ "use and throw    " ತರಹ ವರ್ತಿಸಬಹುದು. ಕೆಲಸವಾಗುವವರೆಗೆ ಮಾಡಿಸಿಕೊಂಡು<ಪುಗಸಟ್ಟೆ> ನಂತರ ತಮ್ಮ  stop <ಜೀವನ!> ಬಂದಾಗ ಸದ್ದಿಲ್ಲದೇ ಮರೆಯಾಗಿ, ನಿಮ್ಮ ಕುರಿತು ಇಲ್ಲಸಲ್ಲದ ಹೇಳಿಕೆ, ವಿರೋಧಿಭಿಪ್ರಾಯಗಳ  ಫಲಕಗಳನ್ನು ಹಾಕಿಯೇ ಬಿಡುತ್ತಾರೆ! ಎಲ್ಲಿ ತಮ್ಮಿಂದ ಕೆಲಸ , ಸಹಾಯ ಕೇಳಿದರೆ?  ಸದ್ದಿಲ್ಲದೇ ಮದ್ದನ್ನು ಅರೆಯುವರು ಈ ಜನರು!

                    ಅನುಭವದ ಮೂಸೆಯಿಂದ ಹೊರಹಾಕಲ್ಪಟ್ಟಿದೆ.... 
                                                             ಚಂದ್ರಿಕಾ ಹೆಗಡೆ     

13 ಕಾಮೆಂಟ್‌ಗಳು:

  1. ನಿಜ Madam ಕೆಲವರಂತು ನಕ್ಕರೆ ಮುತ್ತು ಉದುರುತ್ತೆ ಅನೋ ತರಹ ಇರುತ್ತಾರೆ.

    ಪ್ರತ್ಯುತ್ತರಅಳಿಸಿ
  2. Chandrika avre,

    Mukha bhava dindale avra swabhava aritukollabahudu endu kelavaru heluttare...kelavomme houdu ansutte..kelavavaru ee maatige apavaadavaagiyu iruttare....Nimma baraha ishta aitu....

    ಪ್ರತ್ಯುತ್ತರಅಳಿಸಿ
  3. Good observation :) ಕೊನೆಯ ಪ್ಯಾರದಲ್ಲಿನ ನಿಮ್ಮ ಅನುಭವ ನನಗೂ ಬಹಳಷ್ಟು ಸಲ ಆಗಿದೆ!

    ಪ್ರತ್ಯುತ್ತರಅಳಿಸಿ
  4. ashokkodlady... avre... mukaha manasina kannadi annudu...ommomme apavaadaviddaruu.. saamanyavaagi howdu... ondu mandahaasa nammalli aatmavishwaasavannu tumbidare ondu vyangya nagu kollabahudu!

    ಪ್ರತ್ಯುತ್ತರಅಳಿಸಿ
  5. ನಿಮ್ಮ ಅನುಭವಕ್ಕೊಂದು ಸಲಾಂ
    ನಗು ನಗು ನೀ ನಗು.. ಕಿರು ನಗೆ ನಗು..
    ನಗುವಿನ ಬಗ್ಗೆ ಚನ್ನಾಗಿ ಬರೆದಿದ್ದೀರಿ ಮೇಡಂ..
    ನನಗೆ ನನ್ನ ಅಂತೆ.. ನಿಷ್ಕಲ್ಮಷವಾಗಿ ನಗುವವರನ್ನ
    ಕಂಡರೆ ನನಗಿಷ್ಟ..
    ಅದಕ್ಕೆ ಇರಬೇಕು.. ಮಕ್ಕಳ ನಗು.. ಮುಖ..
    ಎಲ್ಲರಿಗೂ.. ಇಷ್ಟ.. ಎಂತ ಕಲ್ಲೆದೆಯವರನ್ನು ಮೃದು ಮಾಡಬಲ್ಲದು..
    ಆ ಮುಗ್ಧ ನಗು..

    ಪ್ರತ್ಯುತ್ತರಅಳಿಸಿ
  6. ಚಂದ್ರಿಕಾರವರೆ..

    " ನಾವು ಮನಃಪೂರ್ತಿಯಾಗಿ ನಗುವದಿರಲಿ...
    ಅಳುವದನ್ನೂ ಮರೆತುಬಿಟ್ಟಿದ್ದೇವೆ..

    ಯಾಕೆಂದರೆ...

    ನಾವೆಲ್ಲರೂ ಬುದ್ಧಿವಂತರಾಗಿದ್ದೇವೆ..
    ಮುಗ್ಧತೆಯನ್ನು ಕಳೆದುಕೊಂಡಿದ್ದೇವೆ..
    ಸಣ್ಣ ವಿಷಯಗಳಲ್ಲಿರುವ ಸಂಭ್ರಮ , ಸಂತೋಷ ನಮಗೆ ಕಾಣುವದಿಲ್ಲ.."

    ಇದು ಶ್ರೀ. ಶೇಷಶಾಸ್ತ್ರಿಗಳ ಮಾತು...

    ಅಭಿನಂದನೆಗಳು ಚಂದದ ಲೇಖನಕ್ಕೆ...

    ಪ್ರತ್ಯುತ್ತರಅಳಿಸಿ
  7. @ ಸಿಮೆಂಟು ಮರಳಿನ ಮಧ್ಯೆ& ಅನಂತರಾಜ್ ivarige vandanegalu... aluvaadaruu ommomme naatakkadaru maaduttare.... naguvannu vyangyavaagi taruttareye horatu... olle naatakaanuu irolla ommomme!

    ಪ್ರತ್ಯುತ್ತರಅಳಿಸಿ
  8. mukhada bhaavagaLage uttama udaaharane maa.pra. devegowdaru mattu yaavaagaloo naguva sadaananda gowadaru. innu abhivyaktige uttama udaaharane Mr.Bean!

    ಪ್ರತ್ಯುತ್ತರಅಳಿಸಿ