14 ಫೆಬ್ರವರಿ 2011

ನನ್ನ ಮಗನ ಮೊದಲ ಹಾಡು

ಹೇಳಬೇಕೆನಿಸಿದ್ದು...
ಚಿಕ್ಕ ಮಕ್ಕಳಲ್ಲಿರುವ ಕ್ರಿಯಾತ್ಮಕತೆ  <creativity > ಯನ್ನು ನೋಡಿ ಬೆರಗಾಗುವ ಎಷ್ಟೋ ಸಂದರ್ಭಗಳು ನನ್ನ ಜೀವನದಲ್ಲಿ ಒದಗಿವೆ.  ನಾನು ಚಿಕ್ಕವಳಿದ್ದಾಗ  ಅಂದ್ರೆ ಸುಮಾರು ೭ ನೆ ತರಗತಿಯಿಂದ ಹಿಡಿದು... ಪಕ್ಕದ ಮನೆಯ ಮಕ್ಕಳನ್ನು  ನೋಡಿ ಅವರನ್ನು ತೀರಾ ಹತ್ತಿರದಿಂದ ನೋಡಿ ಹಲವು ಬೆರಗು ಮೂಡಿತ್ತು... ನಾನು ಕಲಿಸಿದ ಎಷ್ಟೋ ಹಾಡು ಅವರ ಬಾಯಲ್ಲಿ ಬೇರೇನೋ ಸಾಹಿತ್ಯದಲ್ಲಿ ಬಂದಿದ್ದನ್ನು ಕಂಡಿದ್ದೆ. ಕಲಿಸಿದ  ಹೆಜ್ಜೆ ಏನೇನೋ  ಬೇರೆ ಹೆಜ್ಜೆಗಳಲ್ಲಿ  ನರ್ತಿಸುವದನ್ನು ನೋಡಿ ಅಬ್ಭಾ ಎಂದಿದ್ದೆ... ಈಗ ಮನೆಯ ಮಗುವಿನಲ್ಲಿ ನೋಡುವ ಸಂದರ್ಭ .... ವಾಹ್... ಎನ್ನುವ ಸಮಯ... ಹೆತ್ತವರಿಗೆ ಹೆಗ್ಗಣ ಮುದ್ದು ... ಎನ್ನಿಸಿದರೂ ಸರಿ... ಹೇಳಲೇ ಬೇಕು... ನಾನು ಈ ಮೊದಲೇ ಹೇಳಿದ ಹಾಗೆ ನಾನು ಭಾವನೆಯ ಜೊತೆಯಲ್ಲಿ ಹೆಜ್ಜೆ ಹಾಕುವವಳು ....
ನಾನು ರಚಿಸಿದ ಕವನ :
ಚಂದಮಾಮ ಚಕ್ಕುಲಿಮಾಮ
ಅಲ್ಲಿ ಯಾಕೆ ಕುಳಿತಿರುವೆ ಇಲ್ಲಿಗ್ ಬಾರೋ...
ಹಣ್ಣು ಕೊಡುವೆ... ಹಾಲು ಕೊಡುವೆ
ಓಡಿ ಬಾರೋ....
ಮಗುವಿನ ಬಾಯಲ್ಲಿ:
ತಂದಮಾಮ ... ಚನುಮಾಮ
ಇಲ್ಲಿ ಅಲ್ಲಿ  ಆಕೆ...
ಹಾಲ್... ಹಣ್ಣ ಮಮ್ಮ < ಮಮ್ಮ ಕೊಡುತ್ತಾಳೆ ಅಂಥಾ >
ಕೂಉಕಾ  ಬಾಲೋ....<ಕುಳಿತುಕೋ>
ಖಾಲಿ... ಇಲ್ಲ...< ಎಲ್ಲಾದರೂ ಚಂದಮಾಮ ಬಂದರೆ ಅಂಥಾ ಖಾಲಿ ಅಂತ ಹಾಡಿನ ತುದಿ>
ನನ್ನ ರಚನೆ:
ಮಮ್ಮ ಬಂದಳೇನೆ
ಪಪ್ಪಾ ಬಂದರೇನೆ ...
 ಇದು ನಾನು ಅವನು ಹಸುಗೂಸು ಇರುವಾಗ ಹೇಳುತ್ತಿದ್ದೆ.
ಅದು ಅವನ ಮನದಲ್ಲಿ ನೆಲೆಯೂರಿದ್ದು ಈ ರೀತಿ :
ಮಮ್ಮನೆನೆ ಪಪಾನೆನೆ ಪಾಪುವೇನೆ
ನೆನೆ ನೆನೆ
ಪಪ್ಪಲೇನೆ<ಚಪ್ಪಲ್>
ಬೌ ಬೌ ವೇನೆ
ತಾರ್ ಏನೇ<ಸ್ಟಾರ್>
ಅಜ್ಜ ಏನೇ.......
ಹೀಗೆ ಅವನ ನಿಘಂಟಿನ  ಬುಟ್ಟಿಯೊಳಗೆ ಸೇರಿರುವ ಪದಗಳೆಲ್ಲ ಸೇರುತ್ತಿವೆ.
  
                               ಮಗುವಿನ ಜೊತೆ ...ಮಗುವಾಗುವ    ಮನಸು      
                               ಚಂದ್ರಿಕಾ ಹೆಗಡೆ                    

9 ಕಾಮೆಂಟ್‌ಗಳು:

  1. ಡಾಕ್ಟ್ರೇ, ಶಿಶು ಸಾಹಿತ್ಯವನ್ನು ಜಾನಪದ ಸಾಹಿತ್ಯಕ್ಕೆ ಸರಿ ಸಮವಾಗಿ ಪ್ರಾಜ್ಞರು ಗುರುತಿಸಿದ್ದಾರೆ. ನಿಮ್ಮ ಕವನವನ್ನು ಮಗುವು ತಿರುಚಿ ಬಳಸಿದರೂ ನಿಮಗೆ ಸಿಟ್ಟೇ ಬಾರದ ಸಾಹಿತ್ಯದ ಏಕೈಕ ಪ್ರಕಾರವೇ ಶಿಶು ಸಾಹಿತ್ಯ. ನಿಮ್ಮ ಬರಹ ನನ್ನ ಅಮ್ಮನ ಹಾಡುಗಳನ್ನೂ ನೆನಪಿಸಿತು. ಧನ್ಯವಾದಗಳು.
    ನನ್ನ ಬ್ಲಾಗಿಗೆ ಒಮ್ಮೆ ಬನ್ನಿ.
    www.badari-poems.blogspot.com
    www.badari-notes.blogspot.com
    facebook profile: Badarinath Palavalli

    ಪ್ರತ್ಯುತ್ತರಅಳಿಸಿ
  2. thank u sir! nimma abhipraaya nija... dudidu sustaaguva taayige madilinalli kusannu ittu kondre adondu santrapti... aayaasavellaa parihaara! maguvina saarvakaalika modi hegide nodi!

    ಪ್ರತ್ಯುತ್ತರಅಳಿಸಿ
  3. ಸಣ್ಣ ಮಕ್ಕಳ ಸಾಹಚರ್ಯವೇ ಸೊಗಸು...
    ಅವರೊಂದಿಗೆ ಇದ್ದಾಗ ಕಾಲ ಕಳೆದದ್ದೇ ಗೊತ್ತಾಗ್ತಿಲ್ಲೆ..
    ನಿಜಕ್ಕೂ.. ನೀವು ಹೇಳಿದಂಗೆ ನಾವು ಹೇಳದು ಒಂದು
    ಅದನ್ನ ಅವು ಬೇರೆಯದೇ ರೀತಿಯಲ್ಲಿ ಹೇಳಿ
    ನಮಗೆ ಆಶ್ಚರ್ಯ ಉಂಟು ಮಾಡ್ತಾ..
    ಆ ಅನುಭವವನ್ನ ಸಾಹಿತ್ಯಕ್ಕೆ ತುಂಬಾ ಚನ್ನಾಗಿ ತಗಂಡು ಬಂಜ್ರಿ..

    ಪ್ರತ್ಯುತ್ತರಅಳಿಸಿ
  4. nanna magalu play school shuru maadida hosatu......aaga avalu schoolinalli heelikotta ondu rhyme maneli heeltidlu..."kiss maadhav good night"!!! endu.......(avla classinalli maadhav anno ondu huduga beere idda). nanage idara tale buda artha aagalilla, aameele avra teacher ge keelidaaga tileetu, adu "kiss mother good night" :-) anta.( 10 little fingers n 10 lill toes.........haadu)

    ಪ್ರತ್ಯುತ್ತರಅಳಿಸಿ