28 ಮಾರ್ಚ್ 2011

ಕಾದ ಮಾತು...

ಮರುಭೂಮಿಯೆಡೆ  ಒಂದು ಮರ
ತನ್ನಿ ಸನಿಹದ ಜಲವ ರೂಕ್ಷಗೊಳಿಸಿ
ಬೇರುಗೊಲೆಯಾದುದ ನಾ ಕಂಡೆ .
ಕಳವಳಗೊಂಡ ಸ್ವಂತ ಮನಸು
ನಿನ್ನ ಸಮಾಧಾನದ ಹಂಗಿಗೆ
 ಕಾದು ಕುಳಿತಿದೆ ಕಾಡಬೇಡ.
ಕೊಳೆತ ಜಿಡ್ಡು ಜಿಡ್ಡಾದ ಮನವ
ತೊಳೆಯುವಲ್ಲಿ ಸಹಕರಿಸು , ತಿಳಿನೀರಿನಿಂದಲೇ .
ಕುಡಿವ ನೀರಿಗೆ
 ಕೊಳೆ ತೊಳೆಯುವ  ಭಾಗ್ಯ?
ಮನ -ಕಾದುಕೊಂಡ ಮರಳು
ನೀ, ಎಷ್ಟೇ ನೀರ ಹನಿಸಿದರೂ
ಮಾಯ! ನಾ ಬಲ್ಲೆ.
ತಿಳಿ ತಿಳಿದು ಕಾಯುವ ನನ್ನೀ
ಕಾತುರಗಳು ಕೊಂಡಿ ಕೊಂಡಿಯಲ್ಲೇ
ಒತ್ತಟ್ಟಿಕೊಂಡಿವೆ ಗಾಢ ಬಂಧನದ ಬಿಸುಪಿನಲ್ಲಿ
ಮಂದ ಮಾರುತ ಮರೆಯಲ್ಲಿದೆ
ಸೌರಭ ಇನ್ನೆಲ್ಲಿ?
ಮನದ ತೊಳಲಾಟಕ್ಕಿಂತ
ನಾಲಿಗೆ ಹೊರಳುವಿಕೆ ಲೇಸು!


ಪ್ರಕಟ ಸಕಾಲಿಕ ೨೦೦೪ ಅಗಸ್ಟ್ ೨೬


ಕವನ ಬರೆದು ನಿರುಮ್ಮಳಾದ ಕ್ಷಣ ...

                                           ಚಂದ್ರಿಕಾ ಹೆಗಡೆ


6 ಕಾಮೆಂಟ್‌ಗಳು:

  1. ಮನದ ಉದ್ವಿಗ್ನತೆಗೆ ನಿಮ್ಮ ಕವನ ಸಮರ್ಥವಾದ catharsis ಆಗಿದೆ. ಆದುದರಿಂದಲೇ ಕವನ ಬರೆದು ನಿರುಮ್ಮಳಳಾದೆ ಎಂದು ಹೇಳಿದ್ದೀರಲ್ಲವೆ? ನಿಮ್ಮ ಭಾವನೆಯನ್ನು ಸಮರ್ಪಕವಾಗಿ ಅಭಿವ್ಯಕ್ತಿಸುವ ಕವನ.

    ಪ್ರತ್ಯುತ್ತರಅಳಿಸಿ
  2. ನಿಜ ಸರ್ ಜೀವನದ ಶೋಧನೆಯಲ್ಲಿ ( ಕ್ಯಾಥರ್ಸಿಸ್) ಇಂಥಹ ಎಸ್ಟೋ ಭಾವನೆಗಳು ಸೇರಿರುತ್ತವೆ. ಒಮ್ಮೊಮ್ಮೆ ಹೇಗೇಗೋ ಅಭಿವ್ಯಕ್ತಿಗೊಳ್ಳುತ್ತವೆ.

    ಪ್ರತ್ಯುತ್ತರಅಳಿಸಿ
  3. ಮನದ.. ಬೇಗುದಿಯಿಂದ.. ಹೊರ ಬರದೆ.. ಇದ್ದರೆ ಮನಸ್ಸೇ..ವಿಷವಾಗುತ್ತದೆ.. ಅದಕ್ಕಿಂತ.. ಮನಸಿನ ಆ ತಳಮಳವನ್ನ.. ಹೊರ ಹಾಕಿ.. ಕುಡಿಯುವ ನೀರಿನಷ್ಟೇ.. ನಿಷ್ಕಲ್ಮಷವಾಗಿ ಮನಸನ್ನ.. ಇಟ್ಟುಕೊಳ್ಳುವುದು ಒಳಿತು.. ಅದಕ್ಕಾಗಿ.. ಮಾತು.. ಬರಹ.. ಮುಂತಾದ ಹಲವು.. ಅಭಿವ್ಯಕ್ತಿ.. ವಿಧಗಳ ತಿಳಿ ನೀರನ್ನ.. ಬಳಸುವುದು ಒಳಿತು.. ಅಕ್ಕ.. ನಿಜಕ್ಕೂ.. ಮನಸನ್ನ. ಮರುಭೂಮಿ ಮಾಡಿಕೊಳ್ಳದೆ.. ಬದಕಲೇ ಸುಲಭ ವಿಧಾನ ಹೇಳಿಕೊತ್ತಿದ್ದೆ.. ಕವನ ಸೂಪರ್..

    ಪ್ರತ್ಯುತ್ತರಅಳಿಸಿ