03 ಮಾರ್ಚ್ 2011

ಸಂಬಂಧ ದೂರವಾಗುವದೇ ? ದೂರ ಮಾಡುತ್ತೇವೆಯೇ!

ಚಿಕ್ಕವರಿದ್ದಾಗ ಆತ್ಮೀಯ ಸ್ನೇಹಿತ/ ಸ್ನೇಹಿತೆ ಯರಿಗೆ ಇನ್ನೊಬ್ಬರೂ ಆತ್ಮೀಯರಾಗುತ್ತಿದ್ದರೆ    ಅಂದ್ರೆ ಎನೋ ಒಂಥರಾ ಸಿಟ್ಟೂ.. ಹೊಟ್ಟೆಕಿಚ್ಚೋ...ಆಗುತ್ತಿರುವದನ್ನು ಗಮನಿಸಿಕೊಂಡಿದ್ದೆ. ಎಲ್ಲೋ ನಮ್ಮಿಂದ ದೂರವಾಗಬಹುದು ಅಂಥಾ. ಆಗ ಈ ಪರಿಸ್ಥಿತಿ  ಎಷ್ಟು   ಗಂಭೀರವಾಗುತ್ತಿತ್ತೆಂದರೆ  ದೂರವಾಗುತ್ತೆವೆನೊ ಎಂಬ ಆತಂಕದಿಂದಲೇ  ನಾವೇ ದೂರವಾಗುವಸ್ಟು...
ದಿನಗಳೆದಂತೆ  ಅರ್ಥವಾಗತೊಡಗಿತು ....

ಮುಂದಿನ ದಿನಗಳು ಎಲ್ಲ ಸ್ನೇಹತ್ವ ಮಯ!



ಜೀವನದ ಹೊಸ ತಿರುವುಗಳಲ್ಲಿ ಮನುಷ್ಯ ಬದಲಾಗದಿದ್ದರೂ ಜವಾಬ್ದಾರಿ-ಕೆಲಸ-ಜಂಜಡಗಳ ನಡುವೆ ನಮ್ಮನ್ನು ಎಷ್ಟು ಆಳಕ್ಕೆ ಇಳಿಸುವದೆಂದರೆ ಅನೇಕ  ವರ್ಷಗಳು ವರೆವಿಗೂ  ಸುತ್ತಣ ಪ್ರಪಂಚದ ಅರಿವೇ ಇಲ್ಲ ಅನ್ನುವಷ್ಟರ ಮಟ್ಟಿಗೆ!

ಪಕ್ಕದ ಮನೆಯ ಮಕ್ಕಳು...ನಮ್ಮೆದುರಿಗೆ ಅ , ಆ ,,, a b c  ಕಲಿತು...ಉತ್ತಮ ವಿದ್ಯಾಭ್ಯಾಸ ಪಡೆದು ಒಳ್ಳೆ ನೌಕರಿ ಯಲ್ಲಿ ಇರುತ್ತಾರೆ . ನಾವು ಹೊರಗಿನಿಂದಲೇ" ನೋಡು ಅವನಿಗೆ/ಳಿಗೆ  ಎಂಥಾ ಸೊಕ್ಕು.... ಮೊದಲು ಕಾಲ್ ಮಾಡ್ತಿದ್ದ ಈಗ ನೋಡು" ಎಂದು ಜರಿಯುತ್ತೇವೆ.. ತನ್ನ ಕೆಲಸದಲ್ಲಿ ಏನೋ ಮಹತ್ವಾಕಾಂಕ್ಷೆಯಿಂದಾ ಆತ ತೊಡಗಿರುತ್ತಾನೆ! ಕಂಡರೆ ಮಾತನಾಡಿಸಿ ವಿಚಾರಿಸುವ ಸೌಜನ್ಯ ಅವನಲ್ಲಿದೆ . ಆದರೆ ನಿರೀಕ್ಷೆ ಹೆಚ್ಚಿನದು!


ಇನ್ನು ಎಲ್ಲರ ಜೀವನದಲ್ಲಿ ಸಾಮಾನ್ಯವಾದ ಪಾಡು !

ಮದುವೆಯಾದ ದಂಪತಿಗಳ ಪಾಡಂತೂ  ಅದರಲ್ಲೂ ಗಂಡಿನ ಪರಿಸ್ಥಿತಿ ದೇವರಿಗೆ ಪ್ರೀತಿ! " ನೋಡು ಅಣ್ಣ  ಅತ್ತಿಗೆಯ ಹಿಂದೆ ಹಿಂದ್  ಹ್ಯಾಗೆ ಹೋಗ್ತಾನೆ" ಅನ್ನೋ ಧ್ವನಿಗಳನ್ನು ಕೇಳಿಸಿಕೊಳಬೇಡಿ  ಸ್ವಾಮೀ... ತಾವು ತಮ್ಮ ಗಂಡಂದಿರ ಬೆನ್ನಟ್ಟಿಕೊಂಡು ಹೋಗುವದನ್ನು ಮರೆತಿರುತ್ತಾರೆ! 
ಹೌದು ಪಾಪ ಮದುವೆಯಾದ ಹೊಸತು. ತೀರಾ ಹೊಸ ಜೀವನ. ಭಾವನೆ ಪ್ರೀತಿಯ ಸಮ್ಮೋಹನ ಇರಬಹುದು. ಮೊದಲು ಕೈಗೊಂಡಾ ಹಾಗೆ ಬಸ್ ಟಿಕೆಟ್ ಮಾಡುವದಕ್ಕೋ... ಬಸ್ ಹತ್ತಿಸುವದಕ್ಕೋ... ಹೋಟೆಲ್ಗೂ... ಕೆಲವೊಮ್ಮೆ ಆಗದೆ ಹೋಗಬಹುದು...  ನೀವು ಕಲಿಯುವದು ಯಾವಾಗ? 

ಹೀಗೆಂದ ಮಾತ್ರಕ್ಕೆ  ಸಹೋದರಿಯರನ್ನು ಮರೆಯುವದು ಅಂತಲ್ಲ... ಅವರಿಗೂ ತಮ್ಮ ಹಾಗೆ ಇನ್ನೊದು ಹೆಣ್ಣು ಇಲ್ಲಿ ಬಂದಿದೆಯಲ್ಲಾ ಜೀವಿಸುವದಕ್ಕೆ ಅಂಥಾ ಒಂದು ಪ್ರಜ್ಞೆ ಇರಬೇಕು! 

ಇದಕ್ಕೆ ಇರಬೇಕು  ಬಹಳ ಧಾರಾವಾಹಿಗಳು ಈ concept  ಇಟ್ಟು ಬಂದಿರುವದು!
ತಮ್ಮನ , ಅಣ್ಣನ ಹೆಂಡತಿ ಬಂದಿದ್ದಾಳೆಂದರೆ ತಂಗಿಯರನ್ನು ಅಕ್ಕಂದಿರನ್ನು  ದೂರ ಮಾಡುವದಕ್ಕಲ್ಲ,  ಹಲೋ... ನೀವು ಬೇರೊಬ್ಬರ ಮನೆಗೆ ಕಾಲಿಡುವಾಗ ಇದೆ ವಿಷ ತುಂಬಿ ಹೋಗಬೇಡಿ ... ಹೋಗಿದ್ದರು  ಈ ವಿಷ ಹರಡಬೇಡಿ!


               ಅಣ್ಣ / ತಮ್ಮ ದೂರವಾದರೆ ? ನಿಮ್ಮಿಂದ ಈ ಕೆಲಸವೇ? 
               ಹೀಗೊಂದು  ಸಾಮಾನ್ಯ ಚಿಂತನೆ!


                  ಸಹೋದರತ್ವದ ಸದ್ಭಾವದಲ್ಲಿ....

                      ಚಂದ್ರಿಕಾ ಹೆಗಡೆ

6 ಕಾಮೆಂಟ್‌ಗಳು:

  1. ಹುಂ.. ನನಗೆ ನನ್ನ ದೊಡ್ಡಪ್ಪ ಹೇಳಿದ್ದು ಇನ್ನೂ ನೆನಪಿದ್ದು.. ನಾನು ನನ್ನ ತಮ್ಮ ಬೇರೆ ಆಗತಿದ್ವಿಲ್ಲೇ. ಏನ್ ಮಾಡದು.. ಗೊತ್ತಿದ್ದೋ ಗೊತ್ತಿಲ್ದೇನೋ.. ಮದ್ವೆ ಆಗಿಬಿಟ್ಯ.. Very nice.. article.. madam...

    ಪ್ರತ್ಯುತ್ತರಅಳಿಸಿ
  2. ನೀವು ಇಲ್ಲಿ ಹೇಳಿದ ಸಂಗತಿಗಳನ್ನು ನಾನು ವಾಸ್ತವದಲ್ಲಿ ನೋಡಿದ್ದೇನೆ. ಒಳ್ಳೇ ವಿಚಾರಪೂರ್ಣ ಲೇಖನ.

    ಪ್ರತ್ಯುತ್ತರಅಳಿಸಿ
  3. ಓದ್ತಾ ಇದ್ರೆ ಅರೆ ನನ್ನ ಮನಸ್ಸಿನಲ್ಲಿರೋ ವಿಷಯ ಚಂದ್ರಿಕಂಗೆ ಹೆಂಗೆ ಗೊತ್ತಾತು? ಹೇಳಿ ಕಾಣಸ್ತು . ಅಂದ್ರೆ ಎಲ್ಲರಿಗು ಅನ್ನಿಸುವನ್ತದ್ದು ಆದ್ರೆ ನಿನ್ನ ತಾರಾ ಸುಂದರ ರೂಪ ಕೊಟ್ಟು ಹೇಳಿಕೊಳ್ಳಲೇ ಬರೆದೆ ಇರುವಂತದ್ದು. ತುಂಬಾ ಚನ್ನಾಗಿ ಬರದ್ದೆ. ನಿನ್ನ ಅರ್ತಿಕಾಲ್ ಓದಲೇ ಖುಷಿ ಆಗ್ತು. ಹೀಗೆ ಬರಿತಾ ಇರು.

    ಪ್ರತ್ಯುತ್ತರಅಳಿಸಿ
  4. howde vijayashree... ellara manadaalada maatu... hige rupu taledu nintide.... hyaang baraddu.... heli uri hachckandavu estooo...

    ಪ್ರತ್ಯುತ್ತರಅಳಿಸಿ