17 ಮಾರ್ಚ್ 2011

ಕನಸ ರೂಪು





ಕನಸುಗಳೇ ಹಾಗೆ !
ಮನ ಬಡಿದೆಬ್ಬಿಸಿ
ತಿಣುಕಾಡಿಸಿ ಕಾಡುವ
ಬಯಕೆಗಳ ರೂಪ..

ಕನಸುಗಳೇ ಹಾಗೆ !
ಬಂಧ , ಭಾವಗಳ
ಸಮ್ಮೋಹದಲಿ  ಮಿಂದು
ಬೆಂದು ನೆನಪಿಸುವ ರೂಪ...


ಕನಸುಗಳೇ ಹೀಗೆ!
ಕಂಡ ಕಂಡಿದ್ದನೆಲ್ಲಾ
ಮರಳಿಸಿ , ಕುಲುಕಾಡಿಸಿ
ಮತ್ತೆ ಮತ್ತೆ ತೋರುವ ರೂಪ..


ಕನಸುಗಳೇ ಹೀಗೆ !
ಮೌನ ವಾಗಿದ್ದುಕೊಂಡೇ
ಮನದಾಳದಿಂದ ಬರುವ
ನೋವು ನಲಿವಿನ ರೂಪ!

ಕನಸಿಗೊಂದು  ರೂಪು ಕೊಡುವ ಸಮಯ ನನ್ನದು..
ಚಂದ್ರಿಕಾ ಹೆಗಡೆ
(ಸಾಪ್ತಾಹಿಕ  ಸೌರಭದಲ್ಲಿ ೨೫-೦೫-೨೦೦೩ ರಲ್ಲಿ  ಪ್ರಕಟ).

4 ಕಾಮೆಂಟ್‌ಗಳು:

  1. ಕನಸುಗಳ ಸ್ವರೂಪವನ್ನು ಎಷ್ಟು ಚೆನ್ನಾಗಿ ಕವನಿಸಿದ್ದೀರಿ!

    ಪ್ರತ್ಯುತ್ತರಅಳಿಸಿ
  2. ಸರ್ ನಿಮ್ಮ ಕಂಮೆಂಟ್ ಸಿಕ್ಕಾಗ ಒಂದು ತರಹ ಸಮಾಧಾನ ... ಇಲ್ಲ ಅಂದ್ರೆ ಏನಾದ್ರೂ ತಪ್ಪು ಬರೆದಿದ್ದಿನ ಅಂತ ಸಂಶಯ... ತಮ್ಮ ಹಾರೈಕೆ ಇರಲಿ ಸದಾ ..

    ಪ್ರತ್ಯುತ್ತರಅಳಿಸಿ