16 ಮಾರ್ಚ್ 2011

ಓ ನನ್ನ ಕಲ್ಪನೆಯೇ

  

                                 ಓ ನನ್ನ ಕಲ್ಪನೆಯೇ .....

ಇರುವ ಒಂದೆರಡು ಕ್ಷಣಗಳಲ್ಲಿ ನಿನ್ನದೆಂತಹ ಸಾಮರ್ಥ್ಯ..ಮುಂದಿನ ದಿನಗಳಿಗೆ ದೂಡುವ ಸಾರಥ್ಯದ ಅತಿಥಿಯೇ ...ಚಂದ್ರ ಬಳಿ ತಾರೆಂಬ ಮಗುವಿನ ಹಠ ನಿನ್ನಿಂದಲೇ.. ಬಳಿ ಬಂದರೆ ಆಟವಾಡಬಹುದೆಂಬ ಸ್ಪೂರ್ತಿ ನಿನ್ನದೇನೆ ....
ಪ್ರೀತಿಯ ಬಯಕೆಯ ಯೌವನದಲ್ಲಿ ಸೌಂದರ್ಯದ ಪರಿಜ್ಞಾನ ನಿನ್ನದೇ... ಇಂತಹ ದಿರಿಸೇ ಬೇಕೆಂಬ ಪ್ರಜ್ನೆಯಿತ್ತದ್ದು ನಿ ಅಲ್ಲವೇ?
ಓ ... ಆಶಯದ ಕಲ್ಪನೆಯೇ ವಿಚಿತ್ರ ನೋಡು ನೀನು ... ಪ್ರೀತಿ ಸಿಂಚನದ ಆಮಿಷವೊಡ್ಡಿ ಪ್ರೀತಿ ಕುರುಡಾಗುವದೂ ನಿನ್ನಿಂದಲೇ 
ಹುಡುಗಿ ಸತ್ತಳು... ಓಡಿಹೋದಳು...ಎಲ್ಲ ನಿನ್ನದೇ ತಾನೇ?
ನಾಳೆಯ ಕಾಯುವಿಕೆ ನಿನ್ನೆಯ ಹಸಿ ಬಿಸಿ ಸತ್ಯ ವರ್ತಮಾನದ ಘಟನೆಗಳೆಲ್ಲಾ ...... ಮತ್ತೇನು ನಿನ್ನದೇ!

"ಮಗು- ಮದುವೆ- ಮೊಮ್ಮಗು"
ಹೆಂಡತಿ -ಗೆಳತಿ ಪ್ರೀತಿಯ ಸೋರಿಕೆ ನಿನ್ನಿಂದಲೇ!

ಕಲ್ಪನೆಯೇ....
" ಬಾಳು ಬೆಳಕಾಗಿಸು ಬರಿದಾಗಿಸಬೇಡ...
ಬದುಕು ಹಸನಾಗಿಸು ಒಣಗಿಸಬೇಡ....
ಕತ್ತಲಲ್ಲಿ ದೀಪ ದೊಡ್ದದಾಗಿರದಿದ್ದರು
ಮೊಂಬತ್ತಿಯನ್ನಾದರೂ  ಬೆಳಗಿಸು"

ಬದುಕೆಂದರೆ ನೀನೆ ಗೊತ್ತು...
ಬದುಕಿನ ಕೊನೆಯೆಂದರೆ ನೀನಾಗಬೇಡ...
ಒಲವಿನ ಕಾರಣ ನೀನೆ...
ಒಲ್ಲದ ಸಂಗತಿಗೆ ಕಾರಣವಾಗದಿರು....

8 ಕಾಮೆಂಟ್‌ಗಳು:

  1. ಕಲ್ಪನೆ ಇಲ್ಲದ ಬದುಕು ಸಾಧ್ಯವೆ? ಉತ್ತಮ ಕಲ್ಪನೆ!

    ಪ್ರತ್ಯುತ್ತರಅಳಿಸಿ
  2. ಕಲ್ಪನೆ ಇಲ್ಲದ ಬದುಕು.. ನಶ್ವರ.. ಹಾಗೇ ಬರೆ ಕಲ್ಪನೆಯೇ ಬದುಕಲ್ಲ.. ತುಂಬಾ ಚಂದ ಮಾಡಿ ಕವನವಾಗಿ ಹೇಳಿದ್ದೆ.. ಅಕ್ಕ.

    ಪ್ರತ್ಯುತ್ತರಅಳಿಸಿ
  3. ಹೌದು ಸಹೋದರ... ಅದಕ್ಕೆ ಬರೆದದ್ದು.. ಕಲ್ಪನೆ... ಜೀವನ...ಪ್ರೀತಿಯ ಕಂಮೆಂಟ್ಗೆ ಧನ್ಯವಾದ

    ಪ್ರತ್ಯುತ್ತರಅಳಿಸಿ