23 ಮಾರ್ಚ್ 2011

ಇವತ್ತು ಬಂದ ಊರಿನ ಸವಿ ಸವಿಯಲ್ಲಿ.....

ಮಾವ ಊರಿಗೆ ಹೋಗುವದನ್ನೇ ಕಾಯುತ್ತಿದ್ದೆ. ನನ್ನ ಲಿಸ್ಟ್ ಸಿದ್ಧವಾಗಿತ್ತು . ಅದ್ರಲ್ಲಿ ಮೊದಲು ಸಂಪಿಗೆ ಹಣ್ಣು. ಈಗ ಸಂಪಿಗೆ ಹಣ್ಣಿನ ಸಮಯ... ಮತ್ತೆ ಹೊಸ ಬೆಲ್ಲ... ಆಲೆಮನೆಯ ಸಮಯ... ಕಬ್ಬು... ಮಾವಿನ ಮಿಡಿ.... ಹೀಗೆ ಲಿಸ್ಟ್ ದೊಡ್ಡದಾಯಿತು... 
ಮಾವ ಕೂಡ ಹಿಂದೆಯಿಲ್ಲ... ತನ್ನ ಫ್ರೆಂಡ್ಸ್ ಮಕ್ಕಳ ಹತ್ತಿರ ಎಲ್ಲವನ್ನು ಲಿಸ್ಟ್ ಕೊಟ್ಟು...ನನ್ನಲ್ಲಿ  ಮತ್ತೆ ಇನ್ನೆನ್ತಾದ್ರು ಇದ್ದ... ಹೇಳು ಹೇಳಿ ಪ್ರೀತಿಯಿಂದಲೇ ಕೇಳಿದ್ದರೆ... ನಾನು ಏನು ಇಲ್ಲ ಅನ್ನುವದರ ಬದಲಾಗಿ ... ನೆನಪು  ಮಾಡ್ಕಂಡು ಹೇಳ್ತೆ  ಎಂಬ ಉತ್ತರ... ನನ್ನ ಮಗನ ಲಿಸ್ಟೇ ಬೇರೆ!... ಪಕ್ಕದ ಮನೆಯ ಆಂಟಿ  ನಿನ್ನ ತಾತ ಎಲ್ಲಿ ಅಂತ ಕೇಳಿದ್ರೆ ಅಭಿಮಾನ ದಿಂದ ದಾಚಾ( ದ್ರಾಕ್ಷಿ)ಹಣ್ಣು ಬಾನಾ(ಬಾಳೆಹಣ್ಣು banana ) ತಂ.. ಹೋದಾ.... ಹೇಳೋ ಉತ್ತರ ಬೇರೆ .....
ಇನ್ನು ಅಮ್ಮ: ಎಂತಾ ಬೇಕೇ... ಅವಳಲ್ಲಿನ ಲಿಸ್ಟ್ ಬೇರೇನೆ... ಅರಿಶಿನ ಹಿಟ್ಟು  ಕೊಡೆ ಮಾರಾಯ್ತಿ ... ಮಾಡ್ಸಿದ್ದು... ನನ್ನ ಪಾಲಿಗೆ ಹುಳಿಸೆಹಣ್ಣು... ಒಣ ಮೆಣೆಸು ಸ್ವಚ್ಚಾ ಮಾಡಿ  ಕೊಡು...ಗೋಳಿ ಸೊಪ್ಪು ... ಎಲೆಗುರಿಗೆ ಸೊಪ್ಪು... ಎಲ್ಲಾ ಕಳಿಸು...

ಮಗಳೆನ್ನುವ... ಪ್ರೀತಿಯ  ಅಮ್ಮ...
ಸೊಸೆಯಾದರು ಮಗಳೆನ್ನುವ  ಮಾವ .... 
ಬದುಕಿಗೆ ಇನ್ನೇನು ಬೇಕು ಅಲ್ವೇ!



 ಊರಿಂದ ಬಂದ ಪ್ರೀತಿಯ ....ಸಂಗತಿಗಳು... 

ಕಬ್ಬು ಬೆಳೆದು ಪ್ರೀತಿಯಿಂದ ಕಳುಹಿಸಿದವರಿಗೆ... 
ನನ್ನ ಧನ್ಯವಾದ...



ವರ್ಷ ಪೂರ್ತಿ ಊಟದ ಜೊತೆ ಸಾಥ್ ಕೊಡುವ ಉಪ್ಪಿನಕಾಯಿ ... ಅಪ್ಪೆಮಿಡಿ ... ಎತ್ತರದಿಂದ ಕೊಯ್ದು ಪ್ರೀತಿಯಲ್ಲಿ ಕೊಟ್ಟವರಿಗೆ... ಕೃತಜ್ಞ 




ಸಂಪಿಗೆ ಹಣ್ಣು ನೆನಪಿಟ್ಟು ತಂದ ಮಾವ ಹಾಗು ಕಳುಹಿಸಿದ ಅವರ ದೋಸ್ತ್  ಗೆ ನಮಸ್ತೆ...




ನಿಮಗೆ ಒಂದೇ ಹಣ್ಣು ಹಾಂ!


ಇವತ್ತು ಬಂದ ಊರಿನ ಸವಿ ಸವಿಯಲ್ಲಿ.... ಪುರುಸೊತ್ತು ಇಲ್ಲದೆಯೇ...ಸವಿಯಲ್ಲಿ  ತಲ್ಲಿನ..
ಚಂದ್ರಿಕಾ ಹೆಗಡೆ
 

5 ಕಾಮೆಂಟ್‌ಗಳು:

  1. ಅಕ್ಕ..ಸರಿ.. ಕಬ್ಬು.. ಸಂಪಿಗೆ.. ಮಾವಿನಮಿಡಿ...ಈ ನಿನ್ನ ಲೇಖನ ಓದಿಯೇ.. ಬಾಯಲ್ಲಿ ನೀರು ಬರ್ತಿದ್ದು.. ಒಂದಾದರೆ ಒಂದು ಯಾವತ್ತು ಕೊಡ್ತಿ ಅಂತ ಹೇಳು..ಮಾವಿನ ಮಿಡಿ ಉಪ್ಪಿನ ಕಾಯಿ ಮಾಡಿ ಕೊಟ್ಟರೆ ಚೊಲೋದು..

    ಪ್ರತ್ಯುತ್ತರಅಳಿಸಿ
  2. ಚಂದ್ರಿಕಾ,
    ಸಂಪಿಗೆ ಹಣ್ಣಿನ ಚಿತ್ರವನ್ನು ನೋಡಿದೆ. ಆದರೆ, ಸಂಪಿಗೆ ಮರದಲ್ಲಿ ಇಂತಹ ಹಣ್ಣುಗಳನ್ನು ನಾನೆಂದೂ ನೋಡಿಲ್ಲ. ಇದು ಸಂಪಿಗೆ ಹೂ ಬಿಡುವ ಮರದ ಹಣ್ಣುಗಳೆ?
    ಈ ಹಣ್ಣಿಗೆ ಬೇರೆ ಹೆಸರೇನಾದರೂ ಉಂಟೆ?

    ಪ್ರತ್ಯುತ್ತರಅಳಿಸಿ
  3. ಸರ್ ಇದು ಮಲೆನಾಡಿನಲ್ಲಿ ಸಿಗುವ... ಸಂಪಿಗೆ ಹಣ್ಣು ಎಂದು ಕರೆಸಿಕೊಳ್ಳುತ್ತದೆ... ಬೇರೆ ಹೆಸರು ಗೊತ್ತಿಲ್ಲ. ಹುಳಿ ಮಿಶ್ರಿತ ಸಿಹಿ...ಮಲೆನಾಡಿನ ಮಕ್ಕಳಿಗೆ ಮಾರ್ಚ್ ದಿಂದ ಮೇ ತನಕ ಸಿಗುವ ಅಮೃತ ಹಣ್ಣು... ತುಂಬಾ ರುಚಿ... ಒಳಗೆ ಬೀಜಗಳು.. ಮರದಲ್ಲಿ ಮುಳ್ಳುಗಳು.. ಮರದಿಂದ ಬಿಡಿಸಿಕೊಲ್ಲುವದು ಸ್ವಲ್ಪ ಕಷ್ಟ. ಆದರೆ ಇಷ್ಟ ಪಟ್ಟು ತಿನ್ನುವ ಹಣ್ಣು.

    ಪ್ರತ್ಯುತ್ತರಅಳಿಸಿ