08 ಏಪ್ರಿಲ್ 2011

ಎಚ್ಚರಿಕೆ

ಭಾವಕ್ಕೆ ವೇಷ ತೊಡಿಸಿ 
ಸಿಕ್ಕಿದ್ದನೆಲ್ಲಾ  ಬಯಲಿನಲ್ಲಿ  ತೆರೆದಿಡಬೇಡ...
ಬಿರುಗಾಳಿ ಬಂದು ತರಗೆಲೆಯಾಗಿ 
ಚಿಂದಿಯಾದೀತು ಜೋಕೆ!

ಹೆಣೆದ ಮಾತನ್ನು ಹಂಚಿಕೊಳ್ಳದಿರು
ಬಲೆಯಲ್ಲಿಯ ಮೀನಿನಂತೆ 
ನಿನ್ನ ಮನ ವಿಲಿ ವಿಲಿ ಒದ್ದಾಡೀತು ಜೋಕೆ!

ಸಿಕ್ಕಂತೆ ಸಿಕ್ಕರೂ ಜನ
ಸ್ನೇಹಿತರು, ಗೆಳೆಯ-ಗೆಳತಿಯರು
ಕುದಿವ ಮನಕೆ ಆರೈಕೆ ನೀಡಲು 
ತಣಿಯದಿರು....
ಕಾದ ಎಣ್ಣೆಯಲ್ಲಿ ಹಾಕಬಹುದು ಹುಷಾರು!
ಹೋಳಿಗೆ ನೀಡುವ ನೆಪದಲಿ--
ಕಾದ ಕಬ್ಬಿಣವ  ಕಿವಿಗಿಡಬಹುದು,
ಗಾಯದ ಮೇಲೆ ಬರೆಯೂ .....
ಜತನವೆಂಬುದು ನಿನ್ನ ಜವಾಬ್ದಾರಿ...

..............................................ಚಂದ್ರಿಕಾ ಹೆಗಡೆ

6 ಕಾಮೆಂಟ್‌ಗಳು:

  1. ಹೆಣೆದ ಮಾತನ್ನು ಹಂಚಿಕೊ0ಡು ಬಿಟ್ಟಿರಲ್ಲ...ಹಹಹ್ಹಾ...ಚೆನ್ನಾಗಿದೆ

    ಪ್ರತ್ಯುತ್ತರಅಳಿಸಿ
  2. ಸರಿಯಾದ ಎಚ್ಚರಿಕೆಯನ್ನು ಮಧುರವಾಗಿ ಹೇಳಿರುವಿರಿ!

    ಪ್ರತ್ಯುತ್ತರಅಳಿಸಿ
  3. ಧನ್ಯವಾದಗಳು sunaath ಸರ್ ತಮ್ಮ ಅಭಿಪ್ರಾಯಕ್ಕೆ...ಎಚ್ಚರಿಕೆಯನ್ನು ಮಧುರತೆಯಲ್ಲಿ ಹೇಳುವ ಪ್ರಯತ್ನ ಅಸ್ಟೆ.

    ಪ್ರತ್ಯುತ್ತರಅಳಿಸಿ
  4. Digwas hegde .... ಹೆಣೆದ ಮಾತನ್ನು ಎಚ್ಚರಿಕೆಯಿಂದಲೇ ಹೆಣೆದಿರುವೆ.... ಬೆಣ್ಣೆಯಲ್ಲಿ ನೂಲನ್ನು ಎಳೆದಂತೆ....

    ಪ್ರತ್ಯುತ್ತರಅಳಿಸಿ