23 ಜನವರಿ 2011

ಜೀವನ ಮಾರ್ಗ

ಜೀವನ ಮಾರ್ಗ


ದಾರಿ ಸಾಗುತ್ತಲೇ ಇದೆ...
ನಡೆದಷ್ಟೂ ...
ನಡು  ನಡುವೆ ಕಂದರ ಪರ್ವತಾವಳಿ
ದಾಟಿದಷ್ಟೂ
ದಾರಿಗುಂಟ ನದಿ, ಕೆರೆ, ಹಳ್ಳ, ವಿಪರೀತ
ಅಂಬಿಗನಿಗೂ ಕೊರತೆ.
ನೆಚ್ಚಿಕೊಂಡು ಇದ್ದಷ್ಟೂ
ಸಮಸ್ಯೆಗಳಾ ಕಂತೆ!
ಸಾಧ್ಯವೇ ಇಲ್ಲ
ಇರುವಲ್ಲೇ  ಇದ್ದು ಕಾಲ ಕಳೆಯುವದು
ಇದ್ದರೂ , ಮರುಳೇ ಸರಿ!
ಸಾಗುತ್ತಲೇ - ಸಿಗುತ್ತಲೇ ಇರುತ್ತಾರೆ
ನಮ್ಮಂಥವರು. ಅವರಂಥವರೂ
ಮಧ್ಯೆ- ಮಧ್ಯೆ ಕಲಹ ಮನಸ್ತಾಪ
ಸಂಭ್ರಮ , ಉಲ್ಲಾಸಗಳ  ನಡುವೆಯೂ :
ಕೊಟ್ಟಷ್ಟೂ ಕಡಿಮೆ ಅವರಿವರಿಗೆ
ನೆಮ್ಮದಿ ಶಾಂತಿ ಕೇಳಬೇಡಿ
ಹೇಳಿಬಿಡಿ ಮತ್ತೊಮ್ಮೆ 'ಜಗತ್ತೇ ಹೀಗೆ'
ಇದಿರಿನಲ್ಲಿ ಮುಖದ ತುಂಬಾ ' ಮಂದ..  ಹಾಸ '
ಬೆನ್ನು ತಿರುಗಿಸಿದಾಗ 'ವ್ಯಂಗ್ಯ  - ಹಾಸ್ಯ '
ಬಿಟ್ಟು ಬಿಡಿ.. ಇಂಥವರನ್ನು
ಸಿಗುತ್ತಾರೆ.. ಒಮ್ಮೊಮ್ಮೆ
ಸ್ನೇಹ , ಪ್ರೀತಿ , ವಾತ್ಸಲ್ಯ ತಿಳಿದವರೂ
ಸೇರಿಬಿಡಿ- ಅವರಲ್ಲೊಂದಾಗಿ
ಹಾಸ , ಮಂದಹಾಸ, ಹಾಸ್ಯ...
ನಕ್ಕುಬಿಡಿ , ಹಿಂದಿನವರ ಮರೆತು
ದಾರಿ ಸಾಗುತ್ತಲೇ ಇದೆಯಲ್ಲ
ನೆನಪಿರಲಿ
ಮತ್ತೊಮ್ಮೆ ಸಿಗಬಹುದು ಹಿಂದಿನಂತವರೂ....
                                                              

 ಎಚ್ಚರಿಕೆಯಲ್ಲಿ....
ಚಂದ್ರಿಕಾ ಹೆಗಡೆ

9 ಕಾಮೆಂಟ್‌ಗಳು:

  1. ಇದು ಮಸ್ತ್ ಇದ್ದು
    ಒಳ್ಳೆ ಕವನ
    ಬದುಕೇ ಒಂದು ದಾರಿ ಅಲ್ದಾ

    ಪ್ರತ್ಯುತ್ತರಅಳಿಸಿ
  2. houdu, kelavomme ketta ghatanegalinda, hintirugi nodidaaga saveda daari teera kadime annisuttade, adee haadi olleya jotegaarariddare beega saagi bandantenusuttade!!!

    ಪ್ರತ್ಯುತ್ತರಅಳಿಸಿ
  3. ಬಿದ್ದಾಗ ನಗುವವರು ಸಹಜ
    ಅದನ್ನೇ .. ನೀ ಹಿಯಾಳಿಕೆ
    ಎನ್ನದಿರು..
    ಗೆದ್ದಾಗ ಅವರೇ ಹೊಗಳುವರಲ್ಲ!!!
    ಮತ್ತೆ ಗೆದ್ದೊಮ್ಮೆ.. ತೋರಿಸು..
    ಹೇಡಿ ನಾನಲ್ಲವೆಂದು...
    ಅವರ ಹಿಯಾಳಿಕೆ ಅನ್ನೇ
    ತಿಳಿ ನೀನು ಮುಂದಿನ
    ನನ್ನ ಗೆಲುವಿಗೆ ಚೇತೋಹಾರಿ ಎಂದು..

    ನಗುತ ಹೇಳುವವರೆಲ್ಲ.. ಹಿಂದೊಂದು
    ಮುಂದೊಂದು.. ಅವರ ಒಳ ಮನಸು ಬೇರೊಂದು..
    ಬದುಕುವ ಕಲೆ ಅರಿತು..
    ಛಲ ಬಿಡದೆ ಸಾಧಿಸು..
    ನಕ್ಕವರು.. ಇಟ್ಟಾರು.. ಮೂಗ ಮೇಲೆ ಬೆಟ್ಟು..

    ಪ್ರತ್ಯುತ್ತರಅಳಿಸಿ