26 ಅಕ್ಟೋಬರ್ 2011

ಬ್ಲಾಗನ್ನೇ ಮರೆತೆಯಾ...

ಬ್ಲಾಗನ್ನೇ ಮರೆತೆಯಾ... 
ಎಂದು ನನ್ನನ್ನೇ ನಾನು ಕೇಳಿ ಕೊಂಡು ಸೋತು... ದೀಪಾವಳಿ ಗೆ ಆದರೂ  "ನಾಲ್ಕು ಸಾಲು ಬರೆದೆ ತೀರುತ್ತೇನೆ"  ಎಂಬ  ತೀರ್ಮಾನಕ್ಕೆ ಬಂದು ಮುದ್ದು ಕಂದನನ್ನು ಅವನ ಅಬ್ಬೆಯ  ಹತ್ತಿರ ಬಿಟ್ಟು ,  ಡಾಕ್ತ್ರ ತ್ರ ಹೋಗಿ ಬರ್ತೀನಿ  ಎಂಬ ಅಮ್ಮಂದಿರ ಸಾರ್ವಕಾಲಿಕ ಸುಳ್ಳಿನ ಬೀಜವನ್ನು  ಅವನ ಮುಂದೆ ಇಟ್ಟು.... ಸುಮ್ಮನೆ ಅಡಗಿ ಕುಳಿತು ಬರೆಯುತ್ತಿದ್ದೇನೆ....ಮಗನ ಹತ್ರ ಮನದಲ್ಲೇ ಕ್ಷಮೆ ಕೇಳಿ...
ಮಗನ ಖಿಲಾಡಿ, ನನ್ನ  ಮನಸನ್ನು ಹಿಡಿದು(ಬಡಿದು!) ...ಒಮ್ಮೊಮ್ಮೆ ಜಾಸ್ತಿಯಾಯ್ತೆನೂ.. ಅಂತ ಇರುವ ಪ್ರೀತಿಯ ಫ್ರೆಂಡ್ಸ್ ಗೆ ಫೋನಾಯಿಸಿ  ನಿನ್ನ ಮಗನು ಹೀಗೆ ಮಾಡ್ತಾನ... ಮಾಡ್ತಿಡ್ನ,,,ಭೂತ... ವರ್ತಮಾನವನ್ನು ಕೇಳಿ.. ನನ್ನ ಭವಿಷ್ಯವನ್ನು ಗಟ್ಟಿ ಮಾಡಿಕೊಳ್ಳುತ್ತಿದ್ದೇನೆ. ಪ್ರಶ್ನೆ ಕೇಳಿ ತಲೆ ತಿನ್ನಬೇಡ...ಅಂತ ಬಯ್ಯುತ್ತಲೇ  ಮನದಲ್ಲೇ  "ಆಯ್ತೆನು ಪ್ರಶ್ನೆ ಕೇಳಿ, ಇನ್ನೊಂದಿಸ್ಟು ಕೇಳೋ...." ಮುಂದುವರೆಯುತ್ತಿದೆ. 



.................ಏನೇನೋ ಬರವಣಿಗೆ... ಓದು... ಕೆಲಸ... ಬಿದ್ದಿದ್ದ ಮನಸನ್ನು ಇನ್ನಾದರೂ ಕೊಡವಿ  ಬರೋಣ ಎಂದರೆ ... ಇನ್ನು ಮತ್ತೆ ೧೫ ದಿನ ಬಹು ಮುಖ್ಯ ಕೆಲಸ!.. ಸ್ನೇಹಿತರ ಬ್ಲಾಗ್ ನೋಡದೆ ಅದೆಸ್ಟು ದಿನ ಆಯಿತೋ





ಮತ್ತೊಂದು ವಿಷಯ ಸ್ನೇಹಿತರೆ.... ಅದೊಂದು ದಿನ ನಾನು ಹೀಗೆ ಒಬ್ಬರ ಹತ್ತಿರ ಮಾತನಾಡುತಿದ್ದಾಗ . ಇಂಟರ್ನೆಟ್ ಒಂದು ಚಟ - ಅದನ್ನ ಬಿಡಕ್ಕೆ ಆಗಲ್ಲ .... ಒಮ್ಮೆ  ಬಿಟ್ ನೋಡಿ ಹಾಗಾದ್ರೆ ಅಂತಾ  ಹೇಳಿದ್ರು... ಅವರ ಮಾತಿಗೂ ಒಂದು ಬೆಲೆ ಕೊಟ್ಟು ನೋಡಿದೆ  ನನಗೇನು ಚಟದ ಹಾಗೆ ಅನ್ನಿಸ್ತ ಇಲ್ಲ...ಅಂತ ಈಗ ಹೇಳಿ ಬಿಟ್ಟೆ ...

ನಿಮ್ಮ ಅನಿಸಿಕೆ.....ನನ್ನ ನಿರೀಕ್ಷೆ....!

ಮನದ ಚಿತ್ತಾರ.... ಬಣ್ಣ ಹಲವು... !

ಚಂದ್ರಿಕಾ ಹೆಗಡೆ






5 ಕಾಮೆಂಟ್‌ಗಳು:

  1. ಚಂದ್ರಿಕಾ ಮೇಡಮ್,
    ನಿಮ್ಮ ಮಗುವೇ ನಿಮ್ಮ ಮುದ್ದು ಬ್ಲಾಗ್ ಆಗಿರುವಾಗ, ಈ ಬ್ಲಾಗಿಗೆ ಬರುವದು ಕಷ್ಟವಾಗುವದು ಸಹಜ. ಆದರೂ ಸಮಯ ಸಾಧಿಸಿ ಬಂದಿದ್ದಕ್ಕೆ ಸಂತೋಷವಾಗಿದೆ.
    Welcome. Happy Deepavali!

    ಪ್ರತ್ಯುತ್ತರಅಳಿಸಿ
  2. Nice 2 c u back......happy deepavali!!!!! Keep blogging!!!!
    Nangantu yajamaanru business trip hodre miss maadalla aadre Internet / books illdidre.....eno kalkonda haage annisuttade

    ಪ್ರತ್ಯುತ್ತರಅಳಿಸಿ
  3. ನಿಜ sunath ಸರ್... ಆದರು ಬರವಣಿಗೆಯ ಬ್ಲಾಗ್ ಯಾವತ್ತಿದ್ದರು ಬದಲಾವಣೆಗೆ ಒಳಗಾಗೋಲ್ಲ ಆದ್ರೆ , ಮಗ - ಮನಸ್ಸು- ಮನುಷ್ಯರು ಬದಲಾಗೋ ಸಾದ್ಯತೆ ಇದೆಯಲ್ಲ....."ಎದೆಯ ಭಾವ ಹೊಮ್ಮುವುದಕೆ ಭಾಷೆಯೊಂದು ಸಾಧನ"!

    ಸುಮನ್.. ಬರಿತಿನೆ....ಪುಸ್ತಕ... ಅಂದ್ರೆ ನಂಗು ಅಸ್ಟೇ ಗೆಳತಿ!
    manamukta- thanku wish u the same....

    ಪ್ರತ್ಯುತ್ತರಅಳಿಸಿ
  4. Welcome to Blog duniya akka.. Hey hello akka e ninna blog kooda ninna innondu magu iddange anta nanna bhavane.. so take care of this child also.. hum adenu online ondu chat anta nanagenu annisidde ille..

    ಪ್ರತ್ಯುತ್ತರಅಳಿಸಿ